ಮಲಗಿದ್ದ ಗಂಡನ ಮೇಲೆ ಬಿಸಿ ಎಣ್ಣೆ ಸುರಿದು ಮೆಣಸಿನ ಪುಡಿ ಎರಚಿದ ಹೆಂಡತಿ! husband

sleep
Published on: 

husband: ಮನೆಯಲ್ಲಿ ಮಲಗಿದ್ದ ಗಂಡನ ಮೇಲೆ ಪತ್ನಿಯೊಬ್ಬಳು ಬಿಸಿ ಎಣ್ಣೆ ಮತ್ತು ಮೆಣಸಿನ ಪುಡಿಯಿಂದ ಹಲ್ಲೆ ನಡೆಸಿದ್ದಾಳೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ.

ಪತ್ನಿಯ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಗಂಡ ಕಿರುಚಿಕೊಂಡಿದ್ದು, ಸ್ಥಳೀಯರು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆ ಪತ್ನಿಗೆ ಈ ರೀತಿಯಾಗಿ ಹಿಂಸೆ ನೀಡಲು ಕಾರಣವು ಇದೆ ಎನ್ನಲಾಗಿದೆ.

ನಡೆದಿದ್ದೇನು?:

ಅಂಬೇಡ್ಕರ್ ನಿವಾಸಿ 28 ವರ್ಷದ ದಿನೇಶ್ ಕೆಲವು ವರ್ಷಗಳ ಹಿಂದೆ ವಿವಾಹವಾದರು. ಅವರಿಗೆ 8 ವರ್ಷದ ಮಗಳು ಕೂಡ ಇದ್ದಾಳೆ. ಪ್ರಸ್ತುತ ಅವರು ಔಷಧ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಕ್ಟೋಬರ್ 2 ರ ರಾತ್ರಿ ಊಟ ಮಾಡಿ ಎಲ್ಲರೂ ನಿದ್ದೆಗೆ ಜಾರಿದ್ದಾರೆ. 3.15 ಕ್ಕೆ, ಅವರ ಪತ್ನಿ ಮಲಗಿದ್ದ ಪತಿಯ ಮೇಲೆ ಬಿಸಿ ಎಣ್ಣೆ ಸುರಿದಿದ್ದಾಳೆ.

ಊರಿ ತಾಳಲಾರದೆ ದಿನೇಶ್ ಕಿರುಚಿದಾಗ, ಮನೆಯ ಮಾಲೀಕರು ಮತ್ತು ನೆರೆಹೊರೆಯವರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯದಿದ್ದಾರೆ. ದಿನೇಶ್ ಅವರನ್ನು ಪರೀಕ್ಷಿಸಿದ ವೈದ್ಯರು ಅವರ ಎದೆ, ಮುಖ ಮತ್ತು ಕೈಗಳ ಮೇಲೆ ಗಂಭೀರ ಗಾಯಗಳಾಗಿರುವುದರಿಂದ ಉತ್ತಮ ಚಿಕಿತ್ಸೆಗಾಗಿ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಪೊಲೀಸರು ಅಂಬೇಡ್ಕರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರಂಭಿಕ ತನಿಖೆಯಲ್ಲಿ ದಂಪತಿಗಳ ನಡುವೆ ಬಹಳ ದಿನಗಳಿಂದ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಎರಡು ವರ್ಷಗಳ ಹಿಂದೆ ಆ ವ್ಯಕ್ತಿಯ ವಿರುದ್ಧ ದೂರು ನೀಡಲಾಗಿತ್ತು, ಆದರೆ ಮಧ್ಯಸ್ಥಿಕೆಯ ನಂತರ ವಿಷಯ ಇತ್ಯರ್ಥವಾಯಿತು. ಪತ್ನಿಯ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.