ಪ್ರೇಯಸಿ ವಿಚಾರಕ್ಕೆ ಜಗಳ; ಕಾಲೇಜು ಆವರಣದಲ್ಲೇ ಚಾಕು ಇರಿತದಿಂದ ಜೀವ ಕಳೆದುಕೊಂಡ ವಿದ್ಯಾರ್ಥಿ

Ashish
Published on

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಆರ್ಯಭಟ ಕಾಲೇಜಿನ ಹೊರಭಾಗದಲ್ಲಿ ವಿದ್ಯಾರ್ಥಿಯೊಬ್ಬ ಚಾಕು ಇರಿತಕ್ಕೊಳಗಾಗಿ ಮೃತಪಟ್ಟಿದ್ದಾನೆ. ನಿಖಿಲ್ ಚೌಹಾಣ್ (19) ಕೊಲೆಯಾದ ವಿದ್ಯಾರ್ಥಿ. ನಿಖಿಲ್ ರಾಜ್ಯಶಾಸ್ತ್ರದಲ್ಲಿ ಬಿಎ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದು, ಪಶ್ಚಿಮ ವಿಹಾರ್ ನಿವಾಸಿ.

ಪ್ರೇಯಸಿಯೊಂದಿಗೆ ಅನುಚಿತ ವರ್ತನೆ ಮಾಡಿದ ಆರೋಪದ ವಿಚಾರವಾಗಿ ಮೃತ ನಿಖಿಲ್ ಹಾಗೂ ಇನ್ನೋರ್ವ ನಡುವೆ ಕಳೆದ ವಾರ ವಾಗ್ವಾದ ನಡೆದಿದೆ. ಈ ದ್ವೇಷದಿಂದ ಆರೋಪಿ ತನ್ನ ಮೂವರು ಸ್ನೇಹಿತರೊಂದಿಗೆ ಬಂದು ಕಾಲೇಜು ಆವರಣದಲ್ಲಿ ನಿಖಿಲ್​ಗೆ ಚಾಕು ಇರಿದಿದ್ದಾನೆ.

ಕೂಡಲೇ ಅಲ್ಲಿದ್ದ ಮಂದಿ ಚಾಕು ಇರಿತಕ್ಕೊಳಗಾದ ನಿಖಿಲ್​ನನ್ನು ಮೋತಿ ಬಾಗ್‌ನ ಚರಕ್ ಪಾಲಿಕಾ ಆಸ್ಪತ್ರೆಗೆ ಕರೆದೊಯ್ದಿದ್ದು, ದಾರಿ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣದ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

ನೈಋತ್ಯ ದೆಹಲಿ ಜಿಲ್ಲೆಯಲ್ಲಿ 24 ಗಂಟೆಯೊಳಗೆ ಇಂದು ಒಟ್ಟು ಮೂರು ಕೊಲೆಗಳು ನಡೆದಿವೆ ಎಂದು ವರದಿಯಾಗಿದೆ. ದೆಹಲಿಯ ಆರ್‌ಕೆ ಪುರಂ ಪ್ರದೇಶದಲ್ಲಿ ಇಬ್ಬರು ಸಹೋದರಿಯರನ್ನು ಗುಂಡಿಕ್ಕಿ ಹತ್ಯೆಗೈದ ಕೆಲವೇ ಗಂಟೆಗಳ ಅಂತರದಲ್ಲಿ ವಿದ್ಯಾರ್ಥಿ ನಿಖಿಲ್‌ನ ಕೊಲೆ ನಡೆದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net