2 ವರ್ಷದ ಮಗುವನ್ನ ಮೊದಲ ಮಹಡಿಯಿಂದ ಎಸೆದು, 3ನೇ ಮಹಡಿಯಿಂದ ಜಿಗಿದ ತಂದೆ! ಪತ್ನಿ ಎದುರೇ ನಿನ್ನೆ ರಾತ್ರಿ ಘೋರ ದುರಂತ

Baby
Published on

ದೆಹಲಿ: ಇಲ್ಲೊಬ್ಬ ಭೂಪ ಪತ್ನಿ ಮೇಲಿನ ಕೋಪಕ್ಕೆ 2 ವರ್ಷದ ಮಗುವನ್ನ ಮೊದಲ ಮಹಡಿಯಿಂದ ಕೆಳಕ್ಕೆ ಎಸೆದು, ಬಳಿಕ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಂದೆ-ಮಗು ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಇಂತಹ ಘಟನೆ ದೆಹಲಿಯ ಕಲ್ಕಾಜಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಮಾನ್ ಸಿಂಗ್ ಆತ್ಮಹತ್ಯೆಗೆ ಯತ್ನಿಸಿದವ. ಪೂಜಾ ಎಂಬಾಕೆ ಜತೆ ಮಾನ್​ಸಿಂಗ್​ ನಾಲ್ಕು ವರ್ಷದ ಹಿಂದೆ ಮದುವೆ ಆಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿಗೆ ದಂಪತಿ ನಡುವೆ ಕೌಟುಂಬಿಕ ಕಹಲ ಉಂಟಾಗಿತ್ತು. ಬೇಸತ್ತ ಪತ್ನಿ, ಕೆಲ ದಿನಗಳಿಂದ ತನ್ನ ಅಜ್ಜಿಯ ಮನೆಯಲ್ಲಿ ಮಕ್ಕಳೊಂದಿಗೆ ವಾಸವಿದ್ದಳು.

ಪತ್ನಿಯನ್ನು ಕರೆದೊಯ್ಯಲು ಬಂದ ಶುಕ್ರವಾರ ಸಂಜೆ ಬಂದ ಮಾನ್​ಸಿಂಗ್​, ಪತ್ನಿ ಜತೆ ವಾಗ್ವಾದ ನಡೆಸಿದ್ದ. ಈತ ಕುಡಿದು ಬಂದಿದ್ದರಿಂದ ಮತ್ತಷ್ಟು ಬೇಸತ್ತ ಪತ್ನಿ, ವಾಪಸ್​ ಬರಲು ಒಪ್ಪಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಕುಡಿದ ಅಮಲಿನಲ್ಲಿ ತನ್ನ 2 ವರ್ಷದ ಮಗುವನ್ನ ಮೊದಲ ಮಹಡಿಯಿಂದ ಕೆಳಗ್ಗೆ ಎಸೆದಿದ್ದಾನೆ. ಬಳಿಕ ಮೂರನೇ ಮಹಡಿಗೆ ಓಡಿಹೋಗಿ ಅಲ್ಲಿಂದ ಜಿಗಿದು ಸಾಯಲು ಯತ್ನಿಸಿದ್ದಾನೆ. ಏನೂ ಅರಿಯದ ಪುಟ್ಟ ಮಗು ಗಂಡ-ಹೆಂಡತಿಯ ಜಗಳಕ್ಕೆ ಸಿಲುಕಿ ಸಾವು-ಬದುಕಿನ ನಡುವೆ ಹೋರಾಡುತ್ತಿದೆ. ಮಗುವನ್ನ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮನ್​ ಸಿಂಗ್​ನನ್ನು ಎಐಐಎಂಎಸ್ ಟ್ರಾಮಾ ಸೆಂಟರ್​ಗೆ ಸ್ಥಳಾಂತರಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net