

ನವದೆಹಲಿ: ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಬೃಹತ್ ಬೆಂಕಿಯಿಂದ ನಾಯಿಯನ್ನು ರಕ್ಷಿಸಲು ( Rescues Dog )ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಡಿದ ಕೆಲವೇ ನಿಮಿಷಗಳಲ್ಲಿ ವ್ಯಾಪಕ ಪ್ರಶಂಸೆ ಪಡೆದಿದೆ.
ಉರಿಯುತ್ತಿರುವ ಜ್ವಾಲೆಗಳು ಮತ್ತು ಅವ್ಯವಸ್ಥೆಯ ನಡುವೆ, ಅಶ್ನಿಶಾಮಕ ಸಿಬ್ಬಂದಿಯ ಭರವಸೆ ಮತ್ತು ಕರುಣೆಯ ಸಂಕೇತವಾಗಿ ಬದಲಾಗಿದೆ. ದಟ್ಟವಾದ ಹೊಗೆ ಮತ್ತು ಬೆಂಕಿಯಲ್ಲಿ ನುಗ್ಗಿ ನಾಯಿಯ ಜೀವವನ್ನು ಉಳಿಸಿದ್ದಾರೆ.
ಭಾವನಾತ್ಮಕ ರಕ್ಷಣೆಯ ವೀಡಿಯೊವನ್ನು 'streetdogsofbombay' ಎಂಬ ಇನ್‌ಸ್ಟಾಗ್ರಾಮ್ ಪುಟವು ಹಂಚಿಕೊಂಡಿದ್ದು, ಅಗ್ನಿಶಾಮಕ ದಳದವರು ಭಯಭೀತರಾದ ನಾಯಿಯನ್ನು ಸುರಕ್ಷಿತವಾಗಿ ಕರೆದೊಯ್ಯುತ್ತಿರುವುದನ್ನು ಈ ವಿಡಿಯೋ ತೋರಿಸುತ್ತಿದೆ. ಕೆಲವು ಸಮಯದ ನಂತರ ಪ್ರಾಣಿಯು ಆರೈಕೆಯೊಂದಿಗೆ ಮತ್ತೆ ಮೊದಲ ಸ್ಥಿತಿಗೆ ಒಂದಾಯಿತು. ಇದು ಸಮಧಾನದ ಕಣ್ಣೀರು ಹಾಕುತ್ತಾ, ಬಾಲ ಅಲ್ಲಾಡಿಸಿದ್ದು, ನೋಡುಗರಿಂದ ಹರ್ಷ ವ್ಯಕ್ತಿಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಡುತ್ತಿದ್ದಂತೆಯೇ, ಅನೇಕ ಪ್ರತಿಕ್ರಿಯೆಗಳು ಬರಲಾರಂಭಿಸಿದ್ದು, ಅಗ್ನಿಶಾಮಕ ದಳದವರನ್ನು ನಿಜವಾದ ನಾಯಕ ಎಂದು ಕರೆದಿದ್ದಾರೆ. ಹಾಗೂ ಈ ಕೃತ್ಯವು ಮಾನವೀಯತೆಯ ಉಜ್ವಲ ಉದಾಹರಣೆ ಎಂದು ಶ್ಲಾಘಿಸಿದರು. ಒಳಕೆದಾರರಲ್ಲಿ ಒಬ್ಬರು ನಾಯಿಯ ಮಾಲೀಕರನ್ನು ಟೀಕಿಸಿದ್ದು, ಸಾಕುಪ್ರಾಣಿಯನ್ನು ಮನೆಯಲ್ಲಿಯೇ ಬಿಟ್ಟು ಹೋಗಿರುವುದು ದುಃಖಕರ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೊಮ್ಮಗನನ್ನು ರಕ್ಷಿಸಲು ಕಾಲುವೆಗೆ ಹಾರಿದ ಅಜ್ಜ, ಇಬ್ಬರೂ ನೀರಿನಲ್ಲಿ ಮುಳುಗಿ ಸಾವು; 10 ಕಿ.ಮೀ ದೂರದಲ್ಲಿ ಶವಗಳು ಪತ್ತೆ..canal
ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಎದುರಿನ ರಾಜ್ಯಸಭಾ ಸದಸ್ಯರ ವಸತಿ ಸಂಕೀರ್ಣವಾದ ಬ್ರಹ್ಮಪುತ್ರ ಅಪಾರ್ಟ್‌ಮೆಂಟ್‌ನಲ್ಲಿ ಶನಿವಾರ ಮಧ್ಯಾಹ್ನ (ಅ.18) ಬೆಂಕಿ ಅವಘಡ ಸಂಭವಿಸಿತು. ಈ ವೇಳೆ ಅಲ್ಲಿನ ನಾಗರಿಕರು ಜೀವವನ್ನು ಉಳಿಸಿಕೊಳ್ಳಲು ಅಪಾರ್ಟ್ಮೆಂಟ್ನಿಂದ ಓಡಿಬಂದಿದ್ದಾರೆ. ಈ ವೇಳೆ ಒಂದು ಮನೆಯಲ್ಲಿ ನಾಯಿ ಬೆಂಕಿಯಲ್ಲೇ ಸಿಲುಕಿಕೊಂಡಿದ್ದು, ಆ ಪ್ರಾಣಿಯನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ತಮ್ಮ ಪ್ರಾಣವನ್ನೇ ಪಣಕಿಟ್ಟು ರಕ್ಷಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಮಧ್ಯಾಹ್ನ 1:20 ಕ್ಕೆ ಅಗ್ನಿಶಾಮಕ ದಳದವರಿಗೆ ಕರೆ ಬಂದಿದ್ದು, ಬೆಂಕಿಯನ್ನು ನಿಯಂತ್ರಿಸಲು 6 ಅಗ್ನಿಶಾಮಕ ವಾಹನಗಳನ್ನು ತಕ್ಷಣವೇ ರವಾನಿಸಲಾಗಿದೆ. ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಮತ್ತು ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಕಟ್ಟಡದಲ್ಲಿನ ಅಗ್ನಿಶಾಮಕ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿರಲಿಲ್ಲ ಮತ್ತು ಘಟನೆಯ ಸಮಯದಲ್ಲಿ ಟ್ಯಾಂಕ್ ಅಥವಾ ಪೈಪ್‌ಲೈನ್‌ಗಳಲ್ಲಿ ನೀರು ಲಭ್ಯವಿರಲಿಲ್ಲ ಎಂದು ಹಲವಾರು ನಿವಾಸಿಗಳು ಹೇಳಿಕೊಂಡಿದ್ದಾರೆ. ಬೆಂಕಿಯ ಕಾರಣವನ್ನು ಕಂಡುಹಿಡಿಯಲು ತನಿಖೆಯನ್ನು ಪ್ರಾರಂಭಿಸಲಾಗಿದೆ. (ಏಜೆನ್ಸೀಸ್)