ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆ; ಮತ ಎಣಿಕೆ ಪ್ರಕ್ರಿಯೆ ಆರಂಭ: ಬಿಜೆಪಿ, ಆಪ್​ಗೆ ಗೆಲ್ಲುವ ವಿಶ್ವಾಸ

DEHLI ELELCTION 1
Published on

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭಾ ಚುನಾವಣೆ ಮತ ಎಣಿಕೆ 8ರಿಂದ ಆರಂಭಗೊಂಡಿದೆ. ಮೊದಲಿಗೆ ಅಂಚೆ ಮತಗಳನ್ನು ಎಣಿಸಲಾಗುತ್ತಿದೆ.

ಬಿಜೆಪಿ ದೆಹಲಿ ಪ್ರದೇಶದ ಅಧ್ಯಕ್ಷ ಮನೋಜ್​ ತಿವಾರಿ, ಇಂದಿನ ದಿನ ಬಿಜಪಿಯದ್ದಾಗಲಿದೆ. ಇಂದು ದೆಹಲಿಯಲ್ಲಿ ಬಿಜೆಪಿ ಸರ್ಕಾರ ಬರಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಇನ್ನು ಆಪ್​ ಕೇಂದ್ರ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿದೆ. ಕಾರ್ಯಕರ್ತರು ಕಚೇರಿ ಸಿಂಗರಿಸುತ್ತಿದ್ದಾರೆ. ಉಪ ಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ, ನಾವು ಇಂದು ಗೆಲ್ಲುತ್ತೇವೆ, ಏಕೆಂದರೆ ಕಳೆದ 5 ವರ್ಷ ದೆಹಲಿ ಜನರ ಸೇವೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net