ಒಳ ಮೀಸಲಾತಿ ವರದಿ ಜಾರಿ ವಿಳಂಬ ಸಂಜಸವಲ್ಲ

ramaya press meet
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿದರು. ಚಿನ್ನ, ರಾಜೇಂದ್ರ, ರಾಜಣ್ಣ ಇದ್ದರು.
Published on

ಕೋಲಾರ: ನಿವೃತ್ತ ನ್ಯಾಯಾಧೀಶ ನಾಗಮೋಹನ್​ ದಾಸ್​ ಅವರ ನೇತೃತ್ವದ ಪರಿಶಿಷ್ಟ ಸಮುದಾಯಗಳ ಒಳ ಮೀಸಲಾತಿ ಸಮೀಕ್ಷೆಯ ಸಂಪೂರ್ಣ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ವರದಿಯನ್ನು ಸರ್ಕಾರ ಕೂಡಲೇ ಜಾರಿಗೆ ತರಬೇಕು, ವಿಳಂಬ ಮಾಡುತ್ತಿರುವುದು ಸಮಂಜಸವಲ್ಲ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿಯು ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಸರ್ಕಾರ ಯಾಕೆ ವಿಳಂಬ ಮಾಡುತ್ತಿದೆ ಎಂಬುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.

ವರದಿ ಕುರಿತು ಆ.16ರಂದು ಸದನದಲ್ಲಿ ಚರ್ಚೆ ನಡೆಯಲಿದ್ದು, ತೆಗೆದುಕೊಳ್ಳುವ ರ್ನಿಣಯಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ನೊಂದವರ ಪರವಾಗಿ ಮಾತನಾಡಬೇಕಾಗಿದೆ. ಒಳ ಮೀಸಲಾತಿಗೆ ಸಂಬಂಧಿಸಿದಂತೆ ಕಳೆದ 35 ವರ್ಷಗಳ ಹೋರಾಟವನ್ನು ಕೇವಲ 15 ನಿಮಿಷಗಳ ಚರ್ಚೆಯಲ್ಲಿ ಮುಗಿಸುವುದು ಸೂಕ್ತವಲ್ಲ. ನಾಗಮೋಹನ್​ ದಾಸ್​ ಅವರ ವರದಿಯಲ್ಲಿ ಶೇ.1ರಷ್ಟು ಇರುವ ಬಲಗೈ ಸಮುದಾಯವು ತಾವು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದೇವೆ ಎಂದು ವಿರೋಧಿಸುತ್ತಿದ್ದಾರೆ. ಅದರೆ ವರದಿಯ ಜಾರಿಗೆ ಮುನ್ನವೇ ಸೋರಿಕೆಯ ವರದಿಯನ್ನಾಧರಿಸಿ ಮಾತನಾಡುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದರು.

ಸಾಮಾಜಿಕ ಕಾರ್ಯಕರ್ತ ಗಾಂಧಿನಗರದ ಕೆ.ಸಿ.ರಾಜಣ್ಣ ಮಾತನಾಡಿ, ನ್ಯಾಯಾಧೀಶ ನಾಗಮೋಹನ್​ ದಾಸ್​ ಅವರ ಒಳ ಮೀಸಲಾತಿ ವರದಿ ಜಾರಿಗೊಳಿಸಬೇಕು. ಈಗಾಗಲೇ ಸುಪ್ರಿಂ ಕೋರ್ಟ್​ ಸರ್ಕಾರಕ್ಕೆ ಒಳ ಮೀಸಲಾತಿ ಜಾರಿ ಮಾಡಲು ನಿರ್ದೇಶನ ನೀಡಿದೆಯಾದರೂ ವಿಳಂಭ ಧೋರಣೆಯು ನ್ಯಾಯಾಲಯದ ಆದೇಶ ಉಲ್ಲಂಘಿಸಿದಂತಾಗುತ್ತಿದೆ ಎಂದರು.

ಬಹುಜನ ವಿಚಾರ ವೇದಿಕೆಯ ಎಸ್​.ಚಿನ್ನ, ರಾಜೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net