

ನವದೆಹಲಿ: ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯ ಸರಿ ಹೋಗುವಂತೆ ಕಾಣುತ್ತಿಲ್ಲ. ಭಾನುವಾರ ಕೂಡ ಇಲ್ಲಿನ ವಾಯುಗುಣ ತೀರಾ ಕಳಪೆ ಮಟ್ಟದಲ್ಲಿ ಇದೆ ಎಂದು ಗಾಳಿ ಗುಣಮಟ್ಟದ ಸೂಚ್ಯಂಕ ತಿಳಿಸಿದೆ.
ಇಲ್ಲಿನ ಲೋಧಿ ರಸ್ತೆಯಲ್ಲಿ ಭಾನುವಾರ 203 ವಾಯು ಗುಣಮಟ್ಟ ದಾಖಲಾಗಿತ್ತು. ಇದು ತೀರ ಕೆಳಮಟ್ಟದ್ದು. ಫೆಬ್ರವರಿ 9ರಂದು ಭಾನುವಾರ ಗಾಳಿಯ ಗುಣಮಟ್ಟ ಕಳಪೆಗಿಂತ ಕೆಳಗಿಳಿದಿತ್ತು.
ಮತ್ತೆ ಇದು ಸೋಮವಾರವು ಕೂಡ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತನ್ನ ಬುಲೆಟಿನ್ನಲ್ಲಿ ಎಚ್ಚರಿಸಿದೆ.
ದೆಹಲಿಯ ಜನಪ್ರಿಯ ಮಾರುಕಟ್ಟೆ ಮಥುರಾ ರಸ್ತೆಯ ಚಾಂದಿನಿ ಚೌಕ್ನಲ್ಲಿ ಗಾಳಿಯ ಗುಣಮಟ್ಟ 315 ದಾಖಲಾಗಿದ್ದು, ಇದೂ ಕೆಳಮಟ್ಟದ್ದು. ಪಕ್ಕದ ಉತ್ತರ ಪ್ರದೇಶದ ನೋಯ್ಡಾ ಅತ್ಯಂತ ಕಳಪೆ ವಾಯು ಗುಣಮಟ್ಟವನ್ನು ಎಂದು ದಾಖಲಿಸಿದೆ.
ವಾಯುವಿನ ಗುಣಮಟ್ಟ 101ರಿಂದ 200 ಇರಬೇಕು, 201 ರಿಂದ 300 ಇದ್ದರೆ ಕಳಪೆ, 301ರಿಂದ 400 ಇದ್ದರೆ ತೀರಾ ಕಳಪೆ, 401ರಿಂದ 500 ಇದ್ದರೆ ಅದು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.
ಇಂದು ಬೆಳಗ್ಗೆ ಇಲ್ಲಿ ಸಫ್ದರ್ಜಂಗ್ನಲ್ಲಿ ಕನಿಷ್ಠ ಉಷ್ಣಾಂಶ 7 ಡಿಗ್ರಿ ದಾಖಲಾಗಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ. (ಏಜೆನ್ಸೀಸ್)