ದೆಹಲಿಯಲ್ಲಿ ನಂದಿನಿ ಬ್ರಾಂಡ್‌ನ ಹಾಲು; 10 ಸಾವಿರ ಲೀಟರ್ ದಾಟಿದ ಮಾರಾಟ

KMF
Published on

ಬೆಂಗಳೂರು:

ನಂದಿನಿ ಬ್ರಾಂಡ್‌ನ ಕೆಎಂಎ್ ಹಾಲು ದೆಹಲಿ ಮಾರುಕಟ್ಟೆಗೂ ಲಗ್ಗೆ ಇಟ್ಟಿದ್ದು, ಕಡಿಮೆ ಅವಧಿಯಲ್ಲಿ

10 ಸಾವಿರ ಲೀಟರ್ ಹಾಲು ಮಾರಾಟ ಮಾಡುತ್ತಿರುವುದು ದಾಖಲೆ.

ಮುಖ್ಯಮಂತ್ರಿಗಳು ಚಾಲನೆ ನೀಡಿದ ಎರಡು ವಾರದೊಳಗಾಗಿಯೇ 10 ಸಾವಿರ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ನಂದಿನಿ ಹಾಲಿಗೆ ಬೇಡಿಕೆ ಇದ್ದು, ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತಾರ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಕನಿಷ್ಠ 50 ಸಾವಿರ ಲೀಟರ್ ಹಾಲು ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ. 6 ತಿಂಗಳಲ್ಲಿ ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ಗುರಿಯನ್ನು ಕೆಎಂಎ್ ಹೊಂದಿದೆ. ಹೈದರಾಬಾದ್, ಮುಂಬಯಿ, ಚೆನ್ನೈಯಲ್ಲಿ ಯಶಸ್ವಿಯಾಗಿ ಹಾಲು ಮಾರಾಟವನ್ನು ಹೆಚ್ಚಿಸಿಕೊಂಡಿರುವ ರೀತಿಯಲ್ಲಿ ದೆಹಲಿಯಲ್ಲಿಯೂ ಹಾಲು ಮಾರಾಟದಲ್ಲಿ ಹಿಡಿತ ಸಾಧಿಸುವ ಲೆಕ್ಕಾಚಾರದಲ್ಲಿ ಕೆಎಂಎ್ ಇದೆ.

ಪ್ರತಿ ದಿನವೂ ಬೆಂಗಳೂರಿನಿಂದ ದೆಹಲಿಗೆ ಹಾಲು ಸಾಗಾಟ ಮಾಡಲಾಗುತ್ತಿದ್ದು ಅಲ್ಲಿನ ಘಟಕದಲ್ಲಿ ಹಾಲು ಪ್ಯಾಕೇಟ್ ಮಾಡಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ. ದೆಹಲಿಯಲ್ಲಿ ನಂದಿನಿ ಪಾರ್ಲರ್ ತೆರೆಯುವುದು ಕೂಡ ಕೆಎಂಎ್ಗೆ ಸವಾಲಿನ ಕೆಲಸವಾಗಿದ್ದರೂ ಅದರಲ್ಲಿ ಹಿಡಿತ ಸಾಧಿಸಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net