ರಾಹುಲ್ ಗಾಂಧಿ​ ಹಾಗೂ ಜೈರಾಮ್ ರಮೇಶ್ ಚೀನಾ ಗುರುಗಳು; ವಿದೇಶಾಂಗ ಸಚಿವ! Jaishankar

jai shankar
Published on

Jaishankar: ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರನ್ನು ಸ್ವಯಂ ಘೋಷಿತ ಚೀನಾ ಗುರುಗಳು ಎಂದು ವಿದೇಶಾಂಗ ಸಚಿವ ಜೈಶಂಕರ್ ಬುಧುವಾರ (ಜುಲೈ30) ಟೀಕಿಸಿದ್ದಾರೆ.

ಬುಧುವಾರ ರಾಜ್ಯಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವ, ನಾನು ವಿದೇಶಾಂಗ ಇಲಾಖೆಯಲ್ಲಿ ಕೇವಲ 41 ವರ್ಷಗಳನ್ನು ಕಳೆದಿದ್ದೇನೆ. ಚೀನಾದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ರಾಯಭಾರಿಯಾಗಿದ್ದೇನೆ. ಆದರೆ, ಈಗ ಕೆಲವರು ಚೀನಾ ಗುರುಗಳಿದ್ದಾರೆ. ನನ್ನ ಎದುರು ಕುಳಿತಿರುವ ಗೌರವಾನ್ವಿತ ಸದಸ್ಯರ ಚೀನಾ ಮೇಲಿನ ಪ್ರೀತಿ ತುಂಬಾ ದೊಡ್ಡದಾಗಿತ್ತು, ಅದಕ್ಕೆ ಅವರು ಚಿಂಡಿಯಾ ಎಂಬ ಪದವನ್ನು ಸೃಷ್ಟಿಸಿದರು ಎಂದು ಜೈರಾಮ್​ ರಮೇಶ್​ ಅವರನ್ನು ಗುರಿಯಾಗಿಸಿಕೊಂಡು ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

ಅಲ್ಲದೆ, ಮುಂದುವರೆದು ಮಾತನಾಡಿದ ಜೈಶಂಕರ್​, ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಹಿಂದಿನ ಹೇಳಿಕೆಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದರು. ಚೀನಾದೊಂದಿಗಿನ ಗಡಿ ಬಿಕ್ಕಟ್ಟನ್ನು ಮೋದಿ ಸರ್ಕಾರ ನಿಭಾಯಿಸಿದ ರೀತಿ ಬಗ್ಗೆ ರಾಹುಲ್​ ಪದೇಪದೆ ಟೀಕೆ ಮಾಡಿದ್ದಾರೆ. 2023 ರಲ್ಲಿ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ವಿದೇಶಾಂಗ ಸಚಿವರು, ಚೀನಾದ ಬಗ್ಗೆ ಮೇಲ್ನೋಟದ ತಿಳುವಳಿಕೆಯಾಗಿದೆ ಎಂದು ಹೇಳಿದ್ದರು.

"ಚೀನಾ ಮತ್ತು ಪಾಕಿಸ್ತಾನಗಳು ಬಹಳ ಹತ್ತಿರವಾಗಿ ಬೆಳೆದಿವೆ ಎಂದು ಚೀನಾ ಗುರು ಹೇಳುತ್ತಾರೆ. ಆದರೆ, ಅವರು ಏಕೆ ಹತ್ತಿರ ಬಂದರು? ಏಕೆಂದರೆ ನಾವು ಪಿಒಕೆ ಭೂಮಿಯನ್ನು ಅವರಿಗೆ ಬಿಟ್ಟಿದ್ದೇವೆ" ಎಂದು ಜೈರಾಮ್ ರಮೇಶ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಟೀಕಾಪ್ರಹಾರ ನಡೆಸಿದರು.

ಚಿಂದಿಯಾ ಪದದ ಹಿನ್ನೆಲೆ..?

ಭಾರತ ಮತ್ತು ಚೀನಾ ಒಟ್ಟಾಗಿ ಕೆಲಸ ಮಾಡುವ ಕಲ್ಪನೆಯನ್ನು ಉತ್ತೇಜಿಸಲು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, 2000ದ ದಶಕದ ಆರಂಭದಲ್ಲಿ "ಚಿಂದಿಯಾ" ಎಂಬ ಪದವನ್ನು ಸೃಷ್ಟಿಸಿದ್ದರು. 2014ರಲ್ಲಿ ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ರಮೇಶ್, ಹತ್ತು ವರ್ಷಗಳ ಹಿಂದೆ, ನಾನು ಚಿಂಡಿಯಾ ಪರಿಕಲ್ಪನೆಯನ್ನು ಪ್ರಸ್ತಾಪಿಸಿದಾಗ, ಭಾರತ ಮತ್ತು ಚೀನಾ ಸಹಕರಿಸಬಹುದು ಮತ್ತು ಮುಂದಿನ ಸವಾಲುಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡಬಹುದು ಎಂಬುದು ನನ್ನ ಸಂಪೂರ್ಣ ಆಲೋಚನೆಯಾಗಿತ್ತು" ಎಂದು ಹೇಳಿದ್ದರು.

ಚಿಂದಿಯಾ ಹಳೆಯ ದೃಷ್ಟಿಕೋನವಲ್ಲ, ವಾಸ್ತವವಾಗಿ ಎರಡೂ ದೇಶಗಳ ಸರ್ಕಾರಗಳು ಮುಂದುವರಿಸಿಕೊಂಡು ಹೋಗುತ್ತಿರುವುದು ಇದನ್ನೇ" ಎಂದು ರಮೇಶ್ ಆ ಸಮಯದಲ್ಲಿ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net