ಜೆಎನ್​ಯು ವಿವಿಗೆ ದೀಪಿಕಾ ಪಡುಕೋಣೆ ಭೇಟಿ; ವಿದ್ಯಾರ್ಥಿಗಳೊಂದಿಗೆ 15 ನಿಮಿಷ ಕಳೆದ ನಟಿ

PADUKONE
Published on

ನವದೆಹಲಿ: ನಟಿ ದೀಪಿಕಾ ಪಡುಕೋಣೆ ಮಂಗಳವಾರ ಸಂಜೆ ಜೆಎನ್​ಯು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು.

ದೀಪಿಕಾ ಅಲ್ಲಿ ಏನು ಮಾತನಾಡಿಲ್ಲ. ಬದಲಿಗೆ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್​ ಮತ್ತು ವಿದ್ಯಾರ್ಥಿ ಹಳೆಯ ಮುಖಂಡ ಕನ್ಹಯ್ಯ ಕುಮಾರ್​ ಅವರ ಜತೆ ನಿಂತಿದ್ದರು. ಮೂಲಗಳ ಪ್ರಕಾರ ಅವರು ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಂಜೆ 7.30ಕ್ಕೆ ವಿವಿ ಆವರಣಕ್ಕೆ ಬಂದ ದೀಪಿಕಾ, ಅಲ್ಲಿನ ಸಭೆಯಲ್ಲಿ 15 ನಿಮಿಷಗಳ ಕಾಲ ಭಾಗವಹಿಸಿದ್ದರು. ಕೆಲ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಅಲ್ಲಿಂದ ತೆರಳಿದರು.

ದೀಪಿಕಾ ಅವರ ಈ ಭೇಟಿಯಿಂದ ಕೆರಳಿರುವ ಬಿಜೆಪಿ, ಅವರ ಸಿನಿಮಾಗಳನ್ನು ಬಂದ್​ ಮಾಡಿಸಬೇಕು ಎಂದು ಕಿಡಿ ಕಾರಿದೆ.

ಸೋಮವಾರ ಸುದ್ದಿವಾಹಿನಿಯೊಂದರ ಜತೆ ಮಾತನಾಡಿದ್ದ ದೀಪಿಕಾ, "ಜೆಎನ್​ಯು ಹಿಂಸಾಚಾರಕ್ಕೆ ಭಯ ಬಿದ್ದಿಲ್ಲ ಎಂಬ ವಿದ್ಯಾರ್ಥಿಗಳ ಹೇಳಿಕೆಗೆ ಹೆಮ್ಮೆ ಎನಿಸುತ್ತದೆ. ಜನ ಬೀದಿಗಿಳಿದು ತಮ್ಮ ಧ್ವನಿ ಎತ್ತುತ್ತಿದ್ದಾರೆ. ಏಕೆಂದರೆ ಬದಲಾವಣೆಗೆ ಇದು ಅಗತ್ಯ" ಎಂದಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net