'ಸ್ಪಿರಿಟ್'​ ಬೆನ್ನಲ್ಲೇ 'ಕಲ್ಕಿ 2' ಚಿತ್ರಕ್ಕೂ ದೀಪಿಕಾ ಗುಡ್​ಬೈ​! ಇಲ್ಲೇನೂ ಸಮಸ್ಯೆ? ಹೀಗಿದೆ ವರದಿ | Deepika Padukone

Untitled design
Published on

Deepika Padukone: ಇತ್ತೀಚೆಗಷ್ಟೇ ತೆಲುಗು ನಿರ್ದೇಶಕ ಸಂದೀಪ್ ವಂಗಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸ್ಪಿರಿಟ್’​ ಚಿತ್ರದಿಂದ ಹೊರನಡೆದ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ, ಇದೀಗ ಪ್ರಭಾಸ್​ ಅಭಿನಯದ ಮತ್ತೊಂದು ಸಿನಿಮಾ ಕಲ್ಕಿ-2 ಚಿತ್ರದಿಂದಲೂ ಹೊರಹೋಗಲಿದ್ದಾರೆ ಎಂಬ ಸುದ್ದಿಗಳು ಜಾಲತಾಣಗಳಲ್ಲಿ ಹರಿದಾಡಿವೆ. ಹಲವು ಷರತ್ತುಗಳು ಮತ್ತು ದುಬಾರಿ ಮೊತ್ತದ ಸಂಭಾವನೆ ಕಾರಣ ದೀಪಿಕಾರನ್ನು ತಮ್ಮ ಚಿತ್ರದಲ್ಲಿ ಮುಂದುವರಿಸಲು ಸಂದೀಪ್ ಇಚ್ಛಿಸಲಿಲ್ಲ. ಹೀಗಾಗಿ ಅವರನ್ನು ಸ್ಪಿರಿಟ್​ನಿಂದ ತೆಗೆದುಹಾಕಿದರು. ಈ ವಿಚಾರ ಎರಡೂ ಚಿತ್ರೋದ್ಯಮದಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಇದು ಮಾಸುವ ಮುನ್ನವೇ ಇದೀಗ ಮತ್ತೊಂದು ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

ದುಬಾರಿ ಮೊತ್ತದ ಸಂಭಾವನೆ ಮತ್ತು ಚಿತ್ರದ ಲಾಭದ ಪಾಲು ಕೇಳಿದ ಹಿನ್ನೆಲೆ ದೀಪಿಕಾರನ್ನು ಚಿತ್ರದಿಂದ ತೆಗೆದುಹಾಕಲು ಸಂದೀಪ್ ಕಠಿಣ ನಿರ್ಧಾರ ಕೈಗೊಂಡರು. ಆದ್ರೆ, ಪ್ರಭಾಸ್​ 'ಕಲ್ಕಿ-2' ಚಿತ್ರದಿಂದ ಅವರನ್ನು ತೆಗೆದುಹಾಕಲು ಕಾರಣವೇನು ಎಂಬ ಪ್ರಶ್ನೆಗೆ ನಿಗದಿತ ಸಮಯ ಎನ್ನಲಾಗಿದೆ. ತಾಯ್ತನದ ಕಾರಣ ನಿಗದಿತ ಸಮಯಕ್ಕೆ ಮಾತ್ರ ತಾನು ಸೀಮಿತ ಎಂದಿರುವ ದೀಪಿಕಾರ ನಿರ್ಧಾರ ಚಿತ್ರತಂಡಕ್ಕೆ ಕೊಂಚ ಇರಿಸು-ಮುರಿಸು ತಂದಿದೆ ಎನ್ನಲಾಗಿದೆ.

ಇದು ಚಿತ್ರೀಕರಣಕ್ಕೆ ಸಮಸ್ಯೆ ಉಂಟುಮಾಡುತ್ತಿದೆ ಎಂದು ಹೇಳಲಾಗಿದೆ. ಈ ಕಾರಣಗಳಿಂದ ಅವರನ್ನು 'ಕಲ್ಕಿ-2' ಚಿತ್ರದಿಂದ ಕೈಬಿಡಲು ಚಿತ್ರತಂಡ ನಿರ್ಧರಿಸಿರುವುದಾಗಿ ಸಿನಿ ವರದಿಗಳು ಉಲ್ಲೇಖಿಸಿವೆ. ಆದರೆ ಈ ಕುರಿತಂತೆ ಚಿತ್ರತಂಡ ಆಗಲಿ ಅಥವಾ ನಟಿಯಿಂದಾಗಲಿ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂಬುದು ಗಮನಾರ್ಹ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net