ಮುದ್ದು ಮಗಳ ಆಗಮನದಿಂದ ದೀಪ್ವೀರ್ ಖುಷ್​​; ತಾಯ್ತನದ ಬಗ್ಗೆ ದೀಪಿಕಾ ಪಡುಕೋಣೆ ಹೇಳಿದ್ದು ಹೀಗೆ…

Untitled-design-2024-09-15T144151.329
Published on

ಮುಂಬೈ: ಬಾಲಿವುಡ್​ ಕ್ಯೂಟ್​ ಕಪಲ್​​ ದೀಪಿಕಾ ಪಡುಕೋಣೆ ಮತ್ತು ರಣವೀರ್​​ ಸಿಂಗ್​​​ ಇತ್ತೀಚೆಗೆ ಹೆಣ್ಣುಮಗುವಿನ ಪಾಲಕರಾಗಿರುವುದು ಗೊತ್ತೆ ಇದೆ. ಅಂದಿನಿಂದ ದೀಪ್ವೀರ್ ತಂದೆತಾಯಿ ಆಗಿರುವ ಸಂತೋಷದಲ್ಲಿ ಮಗ್ನರಾಗಿದ್ದಾರೆ. ಇದರೊಂದಿಗೆ ರಣವೀರ್ ಸಿಂಗ್ ಅವರ ಹಲವು ವರ್ಷಗಳ ಆಸೆ ಈಡೇರಿದೆ. ಏಕೆಂದರೆ ಈ ಹಿಂದೆ ಅವರು ಮಗಳಿಗೆ ತಂದೆಯಾಗಬೇಕೆಂದು ಹೇಳಿದ್ದರು.

ತಮ್ಮ ಪುಟ್ಟ ರಾಜಕುಮಾರಿ ಆಗಮನದ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಅಂದಿನಿಂದ ಅಭಿಮಾನಿಗಳು ಮಗುವಿನ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದಾದರೂ ವಿಚಾರವನ್ನು ಈ ದಂಪತಿ ಹಂಚಿಕೊಳ್ಳಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದರು. ಅವರ ನಿರೀಕ್ಷೆಯನ್ನು ನಟಿ ದೀಪಿಕಾ ಪಡುಕೋಣೆ ನಿರಾಸೆಗೊಳಿಸಲಿಲ್ಲ.ತಮ್ಮ ಜೀವನದಲ್ಲಿ ತಾಯ್ತನದ ಹೊಸ ಅಧ್ಯಾಯ ಆರಂಭಿಸಿರುವ ದೀಪಿಕಾ ಪಡುಕೋಟೆ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ತನ್ನ ಬಯೋವನ್ನು ಬದಲಾಯಿಸಿದ್ದಾರೆ. ಅಪ್ಡೇಟ್​ ಆಗಿರುವ ಬಯೋದಲ್ಲಿ ಫೀಡ್​, ಬರ್ಪ್​​, ಸ್ಲೀಪ್​​, ರಿಪೀಟ್​ ಎಂದು ಬದಲಾಯಿಸಿದ್ದಾರೆ.

ಮಗುವಿನ ಜನನದ 7 ದಿನಗಳ ಬಳಿಕ ದೀಪಿಕಾ ಪಡುಕೋಣೆ ಆಸ್ಪತ್ರೆಯಿಂದ ಡಿಶ್ಚಾರ್ಜ್​​ ಆಗಿದ್ದಾರೆ. ಅವರನ್ನು ಕರೆದೊಯ್ಯುವಾಗ ಅವರ ತಂದೆ ಪ್ರಕಾಶ್​ ಪಡುಕೋಣೆ ಕಾರಿನ ಮುಂದಿನ ಸೀಟ್​ನಲ್ಲಿ ಕುಳಿತಿರುವುದನ್ನು ನೋಡಬಹುದು. ರಣವೀರ್​​ ಕೂಡ ಜತೆಯಲ್ಲಿ ಇದ್ದರು ಎನ್ನಲಾಗಿದೆ. ವಿಡಿಯೋ ವೈರಲ್​ ಆಗಿದ್ದು ನಾಲ್ಕು ಐಷಾರಾಮಿ ಕಾರುಗಳು ಒಂದರ ಹಿಂದೆ ಒಂದರಂತೆ ಹೋಗುವುದನ್ನು ಕಾಣಬಹುದಾಗಿದೆ.

ಸೆಪ್ಟೆಂಬರ್​ 8 2024ರಂದು ದೀಪಿಕಾ ಮತ್ತು ರಣವೀರ್ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಗುವಿನ ಆಗಮನದ ವಿಚಾರ ತಿಳಿಸುತ್ತಿದ್ದಂತೆ ಅಭಿಮಾನಿಗಳು ಹಾಗೂ ಸೆಲಿಬ್ರಿಟಿಗಳಿಂದ ಅಭಿನಂದನೆಗಳು ಹರಿದುಬರುತ್ತಿದೆ. ಅಲ್ಲದೆ ಇತ್ತೀಚೆಗೆ #DeepVeerBaby ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿದೆ.

ದೀಪಿಕಾ ಪಡುಕೋಣೆ ಇತ್ತೀಚೆಗೆ ಬಿಡುಗಡೆಗೊಂಡ ಕಲ್ಕಿ 2898 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಹಿಂದೆ ಅವರು ಫೈಟರ್ ಮತ್ತು ಪಠಾಣ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ದೀಪಿಕಾ ಪಡುಕೋಣೆ ಅವರು ಮುಂದಿನ ಸಿನಿಮಾ ಸಿಂಗಂ ಎಗೈನ್​​ ನವೆಂಬರ್ 1ರಂದು ತೆರೆಕಾಣಲಿದೆ. ಈ ಸಿನಿಮಾದಲ್ಲಿ ವಿಶೇಷವೆಂದರೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಈ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ಇಬ್ಬರೂ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net