ರೊನಾಲ್ಡೊ, ಹಾರ್ದಿಕ್​ ಪಾಂಡ್ಯವನ್ನು ಹಿಂದಿಕ್ಕಿ ಹೊಸದಾಖಲೆ ಸೃಷ್ಟಿಸಿದ ದೀಪಿಕಾ ಪಡುಕೋಣೆ ! |DipikaPadukone

untitled-design-54-6891e2951ceb6
Published on

DipikaPadukone : ಹಾಲಿವುಡ್​ ನಟಿ ದೀಪಿಕಾ ಪಡುಕೋಣೆ ಕನ್ನಡ ಚಿತ್ರರಂಗವಲ್ಲದೇ ಹಲವಾರು ಚಿತ್ರರಂಗದಲ್ಲಿ ಸಾಧನೆ ಮಾಡುತ್ತಿರುವ ಕಲಾವಿದೆ. ಇವರು ತಮ್ಮ ಚಿತ್ರಗಳಲ್ಲಿ ಪ್ರತಿಯೊಂದು ಪಾತ್ರಕ್ಕೂ ಜೀವತುಂಬಿ ನಟಿಸಿದ್ದಲ್ಲದೇ, ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ದೀಪಿಕಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವಂತಹ ಸೆಲೆಬ್ರಿಟಿ ಬರೋಬ್ಬರಿ 80 ಮಿಲಿಯನ್​ಗಳಷ್ಟು ಫಾಲೋವರ್ಸ್​ಗಳಿದ್ದಾರೆ. ಇವರು ತಮ್ಮ ಚಿತ್ರಗಳು, ಸಿನಿಮಾಗಳ ಬಗ್ಗೆ ಮಾಹಿತಿ​, ಫೋಟೋಶೂಟ್​ ಹಾಗೂ ಜಾಹೀರಾತನ್ನು ಸಹ ಹಂಚಿಕೊಳ್ಳುತ್ತಾರೆ. ಆದರೆ, ಇತ್ತೀಚಿಗೆ ಹಂಚಿಕೊಂಡ ರೀಲ್ಸ್​ ಒಂದು ವೀವ್ಸ್​ ವಿಚಾರದಲ್ಲಿ ದಾಖಲೆ ಸೃಷ್ಟಿಸಿದ್ದು, ನೆಟ್ಟಿಗರು ಬೆರಗಾಗಿದ್ದಾರೆ.

ದಾಖಲೆ ಸೃಷ್ಟಿಸಿದ ವಿಡಿಯೋ!

ದೀಪಿಕಾ ಹಲವಾರು ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವಂತ ನಟಿ. ಅದೇ ರೀತಿಯಲ್ಲಿ ಹಿಲ್ಟನ್​ ಎಂಬ ಹೋಟೆಲ್​ನ ರಾಯಭಾರಿಯಾಗಿ ಕಾಣಿಸಿಕೊಂಡಿದ್ದು, ಜೂನ್​ 9ರಂದು ಹೋಟೆಲ್​ಗೆ ಸಂಬಂಧಿಸಿದ ಜಾಹಿರಾತು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ರೀಲ್ಸ್​ ಹಂಚಿಕೊಂಡ 8 ವಾರಗಳಲ್ಲಿ ಸುಮಾರು 1.9 ಬಿಲಿಯನ್​ ಅಂದರೆ 190 ಕೋಟಿ ವೀಕ್ಷಣೆಯಾಗಿದ್ದು, ಇದು ಇನ್​ಸ್ಟಾಗ್ರಾಮ್​ನಲ್ಲಿ ದಾಖಲೆಯಾಗಿದೆ. ಇಲ್ಲಿಯವರೆಗೂ ಇಷ್ಟು ದೊಡ್ಡ ಮಟ್ಟಿಗೆ ಯಾವ ವಿಡಿಯೋ ಕೂಡ ವೀಕ್ಷಣೆ ಆಗಿಲ್ಲ.

ಇದೊಂದು ಮಾರ್ಕೆಟಿಂಗ್​ ವಿಡಿಯೋ ಆಗಿದ್ದರೂ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಅದ್ಭುತ ವ್ಯಾಪ್ತಿಯನ್ನು ಪಡೆದಿದೆ. ಇನ್ನು ಈ ಬಗ್ಗೆ ಹಲವಾರು ನೆಟ್ಟಿಗರು ಪ್ರತಿಕ್ರಿಯಿದ್ದು, "ಒಂದು ತಿಂಗಳಲ್ಲಿ 2 ಬಿಲಿಯನ್ ವೀಕ್ಷಣೆಗಳನ್ನು ಸಾಧಿಸುವುದು ಇನ್‌ಸ್ಟಾಗ್ರಾಮ್ ಇತಿಹಾಸ" ಎಂದಿದ್ದಾರೆ.

ದೀಪಿಕಾ ಅವರ ಮುಂಬರುವ ಚಿತ್ರಗಳು ಯಾವುವು?

ತಾಯ್ತನಕ್ಕಾಗಿ ಬ್ರೇಕ್​ ತೆಗೆದುಕೊಂಡಿದ್ದ ನಟಿ ಚಿತ್ರರಂಗಕ್ಕೆ ಕಂಬ್ಯಾಕ್​ ಮಾಡುತ್ತಿದ್ದು, ಶಾರುಕ್​ ಜೊತೆ ಕಿಂಗ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ದಕ್ಷಿಣದ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಜೊತೆ ನಟಿಸಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net