

ಮುಂಬೈ: ಬಾಲಿವುಡ್ನ ಕ್ಯೂಟ್ ಕಪಲ್ ದೀಪ್ವೀರ್ ದಂಪತಿ ಸೆಪ್ಟೆಂಬರ್ 8ರಂದು ತಮ್ಮ ಮಗಳ ಆಗಮನದಿಂದ ಪಾಲಕರಾಗುವ ಭಾಗ್ಯವನ್ನು ಪಡೆದರು. ಇತ್ತೀಚೆಗೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತಮ್ಮ ಮನೆಯ ಮುದ್ದಾದ ಲಕ್ಷ್ಮಿಗೆ ದುವಾ ಪಡುಕೋಣೆ ಸಿಂಗ್ ಎಂದು ಹೆಸರಿಟ್ಟಿರುವುದಾಗಿ ದೀಪಿಕಾ ಪಡುಕೋಣೆ(Deepika Padukone) ಸಾರ್ವಜನಿಕವಾಗಿ ತಿಳಿಸಿದರು.
ಮಗಳು ಹುಟ್ಟಿದ ನಂತರ ದೀಪಿಕಾ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಮನೆಯಲ್ಲಿ ತಮ್ಮ ಮಾತೃತ್ವವನ್ನು ಆನಂದಿಸುತ್ತಿದ್ದು ದುವಾ ಅವರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಿದ್ದಾರೆ. ಆದರೆ ಈಗ ಎರಡು ತಿಂಗಳ ನಂತರ, ಅಭಿಮಾನಿಗಳು ಅಂತಿಮವಾಗಿ ದೀಪಿಕಾ ಮತ್ತು ದುವಾ ಅವರನ್ನು ಒಟ್ಟಿಗೆ ನೋಡುವ ಅವಕಾಶ ಸಿಕ್ಕಿತು. ಇತ್ತೀಚೆಗೆ ರಣವೀರ್ ದಂಪತಿ ತಮ್ಮ ಮಗಳೊಂದಿಗೆ ಮುಂಬೈನ ಕಲಿನಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಪೋಲ್ಕಾ ಡಾಟ್ ಟಾಪ್ ಧರಿಸಿದ್ದರೆ, ರಣವೀರ್ ಸಿಂಗ್ ಗುಲಾಬಿ ಬಣ್ಣದ ಟ್ರ್ಯಾಕ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದರು. ತನ್ನ ತಾಯಿಯ ಎದೆಗೆ ಅಂಟಿಕೊಂಡಿದ್ದ ದುವಾ ಗುಲಾಬಿ ಬಣ್ಣದ ಪ್ಯಾಂಟ್ ಧರಿಸಿರುವುದು ಕಂಡುಬಂದಿದೆ. ಆದರೆ ಮಗುವಿನ ಮುಖವನ್ನು ಸಂಪೂರ್ಣವಾಗಿ ಮುಚ್ಚಿದ್ದರೂ. ದಂಪತಿ ಜತೆ ರಣವೀರ್ ಸಿಂಗ್ ತಾಯಿ ಅಂಜು ಭಾವನಾನಿ ಕೂಡ ಇದ್ದರು.
ದೀಪಿಕಾ ಮತ್ತು ರಣವೀರ್ಗೆ ತಮ್ಮ ಮಗಳೊಂದಿಗೆ ಇದು ಮೊದಲ ದೀಪಾವಳಿ ಸಂಭ್ರಮವಾಗಿದೆ. ಮಗುವಿನ ಮುಖವನ್ನು ನಟಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ದೀಪಾವಳಿಯ ಹಬ್ಬದ ಲಕ್ಷ್ಮಿ ಪೂಜೆಯ ವಿಶೇಷ ಸಮಯದಲ್ಲಿ ತಮ್ಮ ಮನೆಯ ಮುದ್ದು ಲಕ್ಷ್ಮಿಯ ಪಾದಗಳ ಅತ್ಯಂತ ಸುಂದರವಾದ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಜತೆಗೆ ತಮ್ಮ ಮಗುವಿನ ಹೆಸರನ್ನು ಬಹಿರಂಗಪಡಿಸಿದರು. ಹಂಚಿಕೊಂಡಿರುವ ಫೋಟೋದಲ್ಲಿ ದುವಾ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿದ್ದು ಕೆಂಪು ಬಣ್ಣದ ಸಲ್ವಾರ್ ಸೂಟ್ ಧರಿಸಿದ್ದಾರೆ.
ಮಗುವಿನ ಹೆಸರನ್ನು ದುವಾ ಪಡುಕೋಣೆ ಸಿಂಗ್ ಎಂದು ಹಂಚಿಕೊಂಡಿರುವ ದಂಪತಿ ಹೆಸರಿನ ಅರ್ಥವನ್ನು ತಿಳಿಸಿದ್ದಾರೆ. ದುವಾ ಎಂದರೆ ಪ್ರಾರ್ಥನೆ ಏಕೆಂದರೆ ಅವರು ನಮ್ಮ ಪ್ರಾರ್ಥನೆಯ ಫಲ. ನಮ್ಮ ಹೃದಯಗಳು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ ಎಂದು ದೀಪಿಕಾ ಮತ್ತು ರಣವೀರ್ ತಿಳಿಸಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇತ್ತೀಚೆಗೆ ಬಿಡುಗಡೆಗೊಂಡ ಸಿಂಗಮ್ ಎಗೇನ್ ಸಿನಿಮಾದ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಜಯ್ ದೇವಗನ್, ಕರೀನಾ ಕಪೂರ್ ಖಾನ್, ಅರ್ಜುನ್ ಕಪೂರ್, ಟೈಗರ್ ಶ್ರಾಫ್, ಜಾಕಿ ಶ್ರಾಫ್ ಮತ್ತು ಅಕ್ಷಯ್ ಕುಮಾರ್ ಸಹ ನಟಿಸಿದ್ದಾರೆ.(ಏಜೆನ್ಸೀಸ್)