ತಾಯಿಯಾಗುತ್ತಿದ್ದಾರೆ ದೀಪಿಕಾ ಪಡುಕೋಣೆ; ಸೆಪ್ಟೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಲಿರುವ ನಟಿ

deepika
Published on

ಮುಂಬೈ: ಬಾಲಿವುಡ್‌ನ ಜನಪ್ರಿಯ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ಇದೆ. ದೀಪಿಕಾ-ರಣ್‌ವೀರ್ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ. ಹೌದು, ದೀಪಿಕಾ ತಾಯಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅವರು ತಾಯಿಯಾಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ದೀಪಿಕಾ ಪ್ರೆಗ್ನೆನ್ಸಿ ಸುದ್ದಿ ಕೇಳಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡುವುದಾಗಿ ದೀಪಿಕಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪೋಸ್ಟ್ ಅನ್ನು ಹಂಚಿಕೊಳ್ಳುವಾಗ, ದೀಪಿಕಾ ಕೈ ಮತ್ತು ದುಷ್ಟ ಕಣ್ಣಿನ ಚಿಹ್ನೆಯ ಇಮೋಜಿಯನ್ನೂ ಹಾಕಿದ್ದಾರೆ. ದೀಪಿಕಾ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಸೆಪ್ಟೆಂಬರ್ 2024, ದೀಪಿಕಾ-ರಣವೀರ್ ಎಂದು ಬರೆಯಲಾಗಿದೆ. ಅಲ್ಲದೆ, ಈ ಫೋಟೋದಲ್ಲಿ ಮಕ್ಕಳ ಬಟ್ಟೆ, ಬೂಟುಗಳು, ಬಲೂನ್​​​​​ಗಳಿವೆ.

ಅಭಿನಂದಿಸಿದ ಸೆಲೆಬ್ರಿಟಿಗಳು-ಅಭಿಮಾನಿಗಳು ದೀಪಿಕಾ ಗರ್ಭಿಣಿಯಾಗಿರುವ ಸುದ್ದಿ ಕೇಳಿ ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರೂ ಸಂತಸಗೊಂಡಿದ್ದಾರೆ. ಎಲ್ಲರೂ ಅವರಿಗೆ ಶುಭ ಹಾರೈಸುತ್ತಿದ್ದಾರೆ. ವಿಕ್ರಾಂತ್ ಮೆಸ್ಸಿ "OMG... ನಿಮ್ಮಿಬ್ಬರಿಗೂ ಶುಭಾಶಯಗಳು" ಎಂದರೆ, ಕೃತಿ ಸನೋನ್ "OMG ನಿಮ್ಮಿಬ್ಬರಿಗೂ ಅಭಿನಂದನೆಗಳು" ಎಂದು ಕಾಮೆಂಟ್ ಮಾಡಿದ್ದಾರೆ. ಒರ್ವ ಅಭಿಮಾನಿ, "ತುಂಬಾ ಸಂತೋಷವಾಗಿದೆ, ಚೆನ್ನಾಗಿ ಆರೋಗ್ಯ ನೋಡಿಕೊಳ್ಳಿ" ಎಂದು ಸಲಹೆ ನೀಡಿದ್ದಾರೆ.

ದೀಪಿಕಾ ಪಡುಕೋಣೆ ಕೆಲವು ಸಮಯದ ಹಿಂದೆ BAFTA ಅವಾರ್ಡ್ಸ್ 2024 ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿ ಅಭಿಮಾನಿಗಳು ಅವರ ಸಾಂಪ್ರದಾಯಿಕ ಅವತಾರವನ್ನು ನೋಡಿದರು. ಅವಾರ್ಡ್ ಫಂಕ್ಷನ್‌ನ ಕೆಲವು ವಿಡಿಯೋಗಳು ವೈರಲ್ ಆಗಿದ್ದು, ಅದರಲ್ಲಿ ಅವರು ತಮ್ಮ ಬೇಬಿ ಬಂಪ್ ಅನ್ನು ಸೀರೆಯೊಂದಿಗೆ ಮರೆಮಾಡಿದ್ದಾರೆ. ವಿಡಿಯೋದಲ್ಲಿ ಆಕೆಯ ಬೇಬಿ ಬಂಪ್ ಅನ್ನು ಅಭಿಮಾನಿಗಳು ಗಮನಿಸಿದ್ದರು. ಇದಾದ ಬಳಿಕ ವಿಮಾನ ನಿಲ್ದಾಣದಲ್ಲಿ ದೀಪಿಕಾ ಕಂಡಾಗಲೂ ಆಕೆಯ ಬೇಬಿ ಬಂಪ್ ಕಾಣಿಸುತ್ತಿತ್ತು.

2018 ರಲ್ಲಿ ಮದುವೆ 

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018 ರಲ್ಲಿ ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾದರು. ಅವರ ಮದುವೆಯಲ್ಲಿ ಕುಟುಂಬಸ್ಥರು ಮಾತ್ರ ಭಾಗವಹಿಸಿದ್ದರು. ಭಾರತಕ್ಕೆ ಮರಳಿದ ನಂತರ, ರಣವೀರ್-ದೀಪಿಕಾ ಬಾಲಿವುಡ್ ಸೆಲೆಬ್ರಿಟಿಗಳಿಗೆ ಆರತಕ್ಷತೆಯನ್ನೂ ಆಯೋಜಿಸಿದ್ದರು. ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net