ಪ್ರಭಾಸ್​ 'ಕಲ್ಕಿ 2' ಚಿತ್ರದಿಂದ ದೀಪಿಕಾ ಪಡುಕೋಣೆಗೆ ಗುಡ್​ಬೈ! ಹಳೆಯ ವಿಚಾರವೇ ಗೇಟ್​ಪಾಸ್​ಗೆ ಕಾರಣ? ಹೀಗಿದೆ ವರದಿ | Deepika Padukone

ವಿಜಯವಾಣಿ (93)
Published on

Deepika Padukone: ಟಾಲಿವುಡ್​ ನಟ ಪ್ರಭಾಸ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಕಲ್ಕಿ 2 ಚಿತ್ರದಲ್ಲಿ ಬಾಲಿವುಡ್​ ಸ್ಟಾರ್​ ನಟಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ವದಂತಿಗಳು ಹರಿದಾಡುವ ಮುನ್ನವೇ ಇದಕ್ಕೆಲ್ಲ ಬ್ರೇಕ್ ಹಾಕಿರುವ ಚಿತ್ರತಂಡ, 2ನೇ ಭಾಗದಲ್ಲಿ ದೀಪಿಕಾ ನಟಿಸುತ್ತಿಲ್ಲ. ಅವರು ನಮ್ಮೊಂದಿಗೆ ಇರುವುದಿಲ್ಲ ಎಂದು ಅಧಿಕೃತ ಪೋಸ್ಟ್​ ಮೂಲಕ ಖಚಿತಪಡಿಸಿದೆ.

ಕಲ್ಕಿ ಚಿತ್ರದಲ್ಲಿ ಸುಮತಿಯ ಪಾತ್ರದಲ್ಲಿ ಮಿಂಚಿದ್ದ ದೀಪಿಕಾ ಪಡುಕೋಣೆ, ಎರಡನೇ ಭಾಗದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಆದರೀಗ, ಅದಕ್ಕೆಲ್ಲ ಪುಲ್​ಸ್ಟಾಪ್​ ಬಿದ್ದಿದೆ. ಇಂದು ಚಲನಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಮೀರಿ ಕಾರಣ ಕೊಟ್ಟಿರುವ ಚಿತ್ರ ತಯಾರಕರು, ನಮಗೆ ಕಮಿಟ್ಮೆಂಟ್​ ಅಗತ್ಯವಿದೆ ಎಂದಿದ್ದಾರೆ.

'ಸ್ಪಿರಿಟ್' ದೀಪಿಕಾ ಹೊರಗೆ​!

ಕೆಲವು ತಿಂಗಳ ಹಿಂದೆಯಷ್ಟೇ, ಪ್ರಭಾಸ್​ ಅಭಿನಯದ 'ಸ್ಪಿರಿಟ್' ಚಿತ್ರದಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ, ಅವರು ದುಬಾರಿ ಮೊತ್ತದ ಸಂಭಾವನೆ, ಲಾಭದಲ್ಲಿ ಪಾಲು ಮತ್ತು ಇಷ್ಟೇ ಅವಧಿ ಮಾತ್ರ ಕೆಲಸ ಮಾಡುವುದು ಎಂಬ ಹಲವು ಷರತ್ತುಗಳನ್ನು ಹಾಕಿದ ಬೆನ್ನಲ್ಲೇ ಅವರನ್ನು ಚಿತ್ರತಂಡದಿಂದ ಕೈಬಿಡಲಾಯಿತು. ನಟಿಯ ಬೇಡಿಕೆಗಳನ್ನು ಈಡೇರಿಸಲು ಒಪ್ಪದ ಚಿತ್ರದ ನಿರ್ದೇಶಕ ಸಂದೀಪ್, ದೀಪಿಕಾ ಜಾಗಕ್ಕೆ ಯುವನಟಿ ತ್ರಿಪ್ತಿ ದಿಮ್ರಿಯನ್ನು ಆಯ್ಕೆ ಮಾಡಿಕೊಂಡರು. ಅಂದು ಈ ಸುದ್ದಿ ಟಾಲಿವುಡ್ ಮತ್ತು ಬಾಲಿವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡಿತು.

X/Vyjayanthi Movies

ಬಾಲಿವುಡ್ ಮೂಲಗಳ ಪ್ರಕಾರ, ದೀಪಿಕಾ ಪಡುಕೋಣೆ, ಕಲ್ಕಿ ಮೊದಲ ಭಾಗಕ್ಕಿಂತ ಹೆಚ್ಚಿನ ಸಂಭಾವನೆಯನ್ನು ಎರಡನೇ ಭಾಗಕ್ಕೆ ಕೊಡಬೇಕು. ಅಂದರೆ ಶೇ.25ರಷ್ಟು ಹೆಚ್ಚಿನ ಮೊತ್ತವನ್ನು ಪೇಮೆಂಟ್ ಆಗಿ ನೀಡಬೇಕು ಎಂದು ಕೇಳಿದ್ದಾರೆ ಎಂದು ಹೇಳಲಾಗಿದೆ. ಇದರೊಟ್ಟಿಗೆ 7 ಗಂಟೆಗಳ ಕಾಲ ಮಾತ್ರ ಕೆಲಸ, 25 ಸಿಬ್ಬಂದಿ ಮತ್ತು ಹೋಟೆಲ್ ವ್ಯವಸ್ಥೆ, ಆಹಾರ ಮತ್ತು ವಿಮಾನ ಟಿಕೆಟ್‌ಗಳು ಸೇರಿದಂತೆ ಹಲವು ವೆಚ್ಚಗಳನ್ನು ನಿರ್ಮಾಪಕರೇ ಭರಿಸಬೇಕು ಎಂಬ ಷರತ್ತುಗಳು ಅವರನ್ನು ಚಿತ್ರದಿಂದ ಕೈಬಿಡುವ ಅನಿವಾರ್ಯತೆಯನ್ನು ತಂದೊಡ್ಡಿದೆ ಎಂದು ಮೂಲಗಳು ತಿಳಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net