ಬೆಂಗಳೂರಿಗೆ ಬಂದ ಪಂಜಾಬಿ ಗಾಯಕನಿಗೆ ಕನ್ನಡ ಹೇಳಿಕೊಟ್ಟ Deepika Padukone

Deepika Padukone
Published on

Deepika Padukone: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಲೈವ್ ಕಾನ್ಸರ್ಟ್​ನಲ್ಲಿ ನಟಿ ದೀಪಿಕಾ ಪಡುಕೋಣೆ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದು , ಖ್ಯಾತ ಗಾಯಕ ದಿಲ್ಜೀತ್ ದೊಸ್ಸಾಂಗ್​ಗೆ ಕನ್ನಡ ಸಹ ಹೇಳಿಕೊಟ್ಟಿದ್ದಾರೆ.

ಖ್ಯಾತ ಪಂಜಾಬಿ ಗಾಯಕ ದಿಲ್ಜೀತ್ ದೊಸ್ಸಾಂಜ್ ಭಾರತದ ಪ್ರಮುಖ ನಗರಗಳಲ್ಲಿ ಸಂಗೀತ ಗೋಷ್ಠಿಗಳನ್ನು ಆಯೋಜನೆ ಮಾಡುತ್ತಿದ್ದಾರೆ. ದಿಲ್ಜೀತ್​ರ ಲೈವ್ ಕಾನ್ಸರ್ಟ್​ ಟಿಕೆಟ್​ಗಳು ಲಕ್ಷಗಳಲ್ಲಿ ಮಾರಾಟವಾಗುತ್ತಿವೆ.  ನಿನ್ನೆ (ಡಿಸೆಂಬರ್ 06) ಬೆಂಗಳೂರಿನಲ್ಲಿ ದಿಲ್ಜೀತ್​ರ ಅದ್ಧೂರಿ ಕಾನ್ಸರ್ಟ್​ ನಡೆಯಿತು. ದಿಲ್ಜೀತ್​ರ ಬೆಂಗಳೂರು ಕಾನ್ಸರ್ಟ್​ಗೆ ಭಾರಿ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು. ದಿಲ್ಜೀತ್​, ತಮ್ಮ ಪ್ರತಿ ಕಾನ್ಸರ್ಟ್​ನಲ್ಲಿ ಒಬ್ಬ ವಿಶೇಷ ಅತಿಥಿಯನ್ನು ವೇದಿಕೆಗೆ ಕರೆತರುತ್ತಾರೆ. ನಿನ್ನೆ ಬೆಂಗಳೂರಿನಲ್ಲಿ ಶೋ ನಡೆಸಿದಾಗ ಕನ್ನಡ ಚಿತ್ರರಂಗದ ಯಾವುದಾದರೂ ತಾರೆಯರನ್ನು ದಿಲ್ಜೀತ್ ಸ್ಟೇಜ್​ಗೆ ಕರೆತರುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ದಿಲ್ಜೀತ್ ದೊಸ್ಸಾಂಜ್ ದೀಪಿಕಾ ಪಡುಕೋಣೆಯನ್ನು ಸರ್ಪ್ರೈಸ್ ಅತಿಥಿಯಾಗಿ ಕರೆತಂದರು.

ವೇದಿಕೆಗೆ ಬಂದ ದೀಪಿಕಾ ಪಡುಕೋಣೆ ದಿಲ್ಜೀತ್ ದೊಸ್ಸಾಂಜ್​ಗೆ ಕನ್ನಡ ಹೇಳಿಕೊಟ್ಟರು. ದೀಪಿಕಾ ಪಡುಕೋಣೆ, ವೇದಿಕೆಗೆ ಬಂದಾಗ ಕನ್ನಡದಲ್ಲಿ ಮಾತನಾಡಲು ದಿಲ್ಜೀತ್ ಯತ್ನಿಸಿದರು. ಆದರೆ ಸರಿಯಾಗಿ ಮಾತನಾಡಲು ಆಗಲಿಲ್ಲ. ಆಗ ದೀಪಿಕಾ ಪಡುಕೋಣೆ, ‘ನಾನು ನಿಮ್ಮನ್ನು ಪ್ರೀತಿಸ್ತೀನಿ’ ಎಂದು ಕನ್ನಡದಲ್ಲಿ ಹೇಳಿಕೊಟ್ಟರು, ದಿಲ್ಜೀತ್ ದೊಸ್ಸಾಂಜ್ ಸಹ ದೀಪಿಕಾ ಪಡುಕೋಣೆ ಹೇಳಿಕೊಟ್ಟಂತೆ ಹೇಳಿದರು. ದೀಪಿಕಾ ಪಡುಕೋಣೆ ಬೆಂಗಳೂರಿನ ಹುಡುಗಿ, ಅವರಿಗೆ ಕನ್ನಡ ಭಾಷೆ ಚೆನ್ನಾಗಿಯೇ ಗೊತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net