

ಮುಂಬೈ: ಇತ್ತೀಚೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಗೊತ್ತೆ ಇದೆ. ಸದ್ಯ ತಾಯ್ತನವನ್ನು ಆನಂದಿಸುತ್ತಿರುವ ದೀಪಿಕಾ ಪಡುಕೋಣೆ ತಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದ್ದರು. ಮತ್ತು ಗರ್ಭಾವಸ್ಥೆಯಲ್ಲಿ ಅವರು ಮುಖದ ಹೊಳಪು ಕಡಿಮೆಯಾಗಿರಲಿಲ್ಲೆ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ.
ಇತ್ತೀಚೆಗಿನ ಸಂದರ್ಶನವೊಂದರಲ್ಲಿ ನಟಿಯ ಯೋಗ ತರೆಬೇತುದಾರರಾದ ಅಂಶುಕಾ ಪರ್ವಾನಿ ದೀಪಿಕಾ ಅವರ ಗರ್ಭಧಾರಣೆಯ ನಂತರದ ತಾಲೀಮಿನ ಬಗ್ಗೆ ತಿಳಿಸಿದ್ದಾರೆ. ಮಗುವಿನ ಜನನದ ನಂತರವೂ ಪ್ರತಿ ಮಹಿಳೆಯ ದೇಹದಲ್ಲಿ ವಿಭಿನ್ನ ಬದಲಾವಣೆಗಳು ಸಂಭವಿಸುತ್ತವೆ. ಆದ್ದರಿಂದ ಮೊದಲಿನಂತೆಯೇ ತಮ್ಮ ದೇಹವನ್ನು ಫಿಟ್ ಆಗಿಡಲು ಪ್ರತಿಯೊಬ್ಬರೂ ವಿಭಿನ್ನವಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ಅವರು ನೀಡಿರುವ ಸಲಹೆ ಗರ್ಭಾವಸ್ಥೆಯಲ್ಲಿರುವವರಿಗೆ ಸಹಾಯ ಆಗಲಿದೆ.
ದೀಪಿಕಾ ಅವರ ವ್ಯಾಯಾಮದ ದಿನಚರಿಯಲ್ಲಿ ಪ್ರಾಣಾಯಾಮವನ್ನು ಸೇರಿಸಿದ್ದಾಗಿ ಯೋಗ ತರಬೇತುದಾರರು ತಿಳಿಸಿದ್ದಾರೆ. ಯೋಗದ ಜತೆಗೆ ಪ್ರಾಣಾಯಾಮ ಮಾಡುವುದು ತುಂಬಾ ಪ್ರಯೋಜನಕಾರಿ. ಗರ್ಭಾವಸ್ಥೆಯ ನಂತರ ಪ್ರಾಣಾಯಾಮ ಮಾಡುವುದರಿಂದ ಯಾವುದೇ ತೊಂದರೆ ಇರುವುದಿಲ್ಲ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಮಹಿಳೆಯರು ಇದನ್ನು ಮಾಡಬಹುದು ಎಂದು ಹೇಳಿದರು.
ಪ್ರತಿಯೊಬ್ಬ ಮಹಿಳೆ ಹೆರಿಗೆಯ ನಂತರ ಉಸಿರಾಟವನ್ನು ಚೆನ್ನಾಗಿ ಮಾಡಬೇಕು. ವಾಸ್ತವವಾಗಿ ಹೆರಿಗೆಯ ನಂತರ ತಾಯಿಗೆ ಉಸಿರಾಟದ ತೊಂದರೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಪಲ್ಮನರಿ ಎಂಬಾಲಿಸಮ್ನ ಕಾರಣದಿಂದಾಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಉಸಿರಾಟದ ವ್ಯಾಯಾಮವು ತುಂಬಾ ಪ್ರಯೋಜನಕಾರಿಯಾಗಿದೆ.
ಗರ್ಭಾವಸ್ಥೆಯ ನಂತರ ಸಣ್ಣ ವ್ಯಾಯಾಮಗಳನ್ನು ಮಾಡುವುದು ಮುಖ್ಯ. ಇದು ಸ್ನಾಯುಗಳು ಮತ್ತು ಸ್ಮರಣೆಯನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಪ್ರಸವಾನಂತರದ ಖಿನ್ನತೆಯಿಂದ ಬಳಲುತ್ತಿರುವ ಮಹಿಳೆಯರು ಲಘು ವ್ಯಾಯಾಮ ಮಾಡುವ ಮೂಲಕ ಸಾಕಷ್ಟು ಪರಿಹಾರವನ್ನು ಪಡೆಯುತ್ತಾರೆ.
ಅನೇಕ ಮಹಿಳೆಯರು ತಾಯಂದಿರಾದ ನಂತರ ಖಿನ್ನತೆಗೆ ಒಳಗಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಧ್ಯಾನ ಮಾಡುವುದು ಒಳ್ಳೆಯದು. ಪ್ರಸವಾನಂತರದ ಆತಂಕವನ್ನು ಧ್ಯಾನ ಮಾಡುವ ಮೂಲಕ ನೈಸರ್ಗಿಕವಾಗಿ ಚಿಕಿತ್ಸೆ ಮಾಡಬಹುದು. ಇದರಿಂದ ದೇಹ ಮತ್ತು ಮನಸ್ಸಿನ ಸ್ನಾಯುಗಳಿಗೂ ಸಾಕಷ್ಟು ವಿಶ್ರಾಂತಿ ಸಿಗುತ್ತದೆ.
ಅವರ ಪ್ರಕಾರ ಮೊದಲನೆಯದಾಗಿ ಮೊದಲ ಮೂರು ತಿಂಗಳುಗಳಲ್ಲಿ ಲಘು ವ್ಯಾಯಾಮದ ಮೂಲಕ ದೇಹವನ್ನು ಕ್ರಮೇಣ ಸಕ್ರಿಯಗೊಳಿಸಬೇಕು. ಇದರ ನಂತರ ಬೇರೆ ಆಸನಗಳನ್ನು ನಾಲ್ಕನೇ ತಿಂಗಳಿನಿಂದ ಪ್ರಾರಂಭಿಸಬಹುದು ಎಂದಿದ್ದಾರೆ.(ಏಜೆನ್ಸೀಸ್)