ಶಾರುಖ್​​​ ಖಾನ್​​​​​, ಜಾಕಿ ಚಾನ್ ಜತೆಗೆ ಹಾಂಗ್ ಕಾಂಗ್ ಟ್ರಿಪ್​​ನಲ್ಲಿರುವ ದೀಪಿಕಾ ದಾಸ್​​​​..!

dmiccc
Published on

ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಧಾರಾವಾಹಿ ಮೂಲಕ ನಟಿ ದೀಪಿಕಾ ದಾಸ್ ಫೇಮಸ್ ಆಗಿದ್ದಾರೆ. ದೀಪಿಕಾ ಅವರು ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಹಾಂಗ್​​​ ಕಾಂಗ್​ಗೆ ಪ್ರವಾಸಕ್ಕೆ ಹೋದ ಫೋಟೋಗಳನ್ನು ದೀಪಿಕಾ ದಾಸ್ ಶೇರ್ ಮಾಡಿದ್ದಾರೆ.


ದೀಪಿಕಾ ದಾಸ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ (Instagram) ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಮತ್ತು ಜಗತ್ ಪ್ರಸಿದ್ಧ ನಟ ಜಾಕಿ ಚಾನ್ ಜೊತೆಯಾಗಿ ನಿಂತ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಹಾಂಗ್ ಕಾಂಗ್ ಪ್ರವಾಸದಲ್ಲಿರುವ ದೀಪಿಕಾ ಅಲ್ಲಿನ ಜಗತ್ ಪ್ರಸಿದ್ಧ ಮೇಡಮ್ ಟುಸ್ಸಡ್ ಮ್ಯೂಸಿಯಮ್ ಗೆ ತೆರಳಿದ್ದು, ಅಲ್ಲಿರುವ ಶಾರುಖ್ ಖಾನ್ ಮತ್ತು ಜಾಕಿ ಚಾನ್ ಮೇಣದ ಪ್ರತಿಮೆ ಜೊತೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ.


ಸದ್ಯ ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಮ್ಯೂಸಿಯಂ ನಲ್ಲಿರುವ ಹಲವಾರು ನಟರ ಮೇಣದ ಪ್ರತಿಮೆ (Wax statue) ಜೊತೆಗೆ ವಿವಿಧ ಫೋಸ್ ನಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ.


ಮೇಣದ ಪ್ರತಿಮೆಯ ರೀತಿಯಲ್ಲೇ ದೀಪಿಕಾ ಪೋಸ್​​ ಕೊಟ್ಟಿದ್ದು, ಜನರು ನೀವು ಯಾವಾಗ ಶಾರುಖ್​​​ ಖಾನ್​ ಅವರನ್ನ ಬೇಟಿ ಮಾಡಿದ್ರಿ ಎಂದು ಪ್ರಶ್ನಿಸಿದ್ದಾರೆ.
ದೀಪಿಕಾ ದಾಸ್​​ ಅಭಿಮಾನಿಗಳು ಸದ್ಯ ಈ ಪೋಟೋ ನೋಡಿ ಹೆಚ್ಚಿನ ಸಂಖ್ಯೆಯಲ್ಲಿ ಲೈಕ್​​ ಮತ್ತು ಕಾಮೆಂಟ್​​​ ಮಾಡಿದ್ದಾರೆ.


ದೀಪಿಕಾ ದಾಸ್ ಹೆಚ್ಚಾಗಿ ದೇಶ, ವಿದೇಶದ ಪ್ರವಾಸ ತೆರಳುತ್ತಲೇ ಇರುತ್ತಾರೆ. ಈ ಹಿಂದೆಯೂ ದೀಪಿಕಾ ವಿದೇಶ ಪ್ರವಾಸದ ಫೋಟೋಗಳನ್ನ ಹಂಚಿಕೊಂಡಿದ್ದು, ಆ ಫೋಟೋಗಳೂ ಕೂಡಾ ವೈರಲ್​ ಆಗಿದ್ದವು.


ನಟಿ ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 07 ಮತ್ತು 09ರಲ್ಲಿ ಮಿಂಚಿದ್ರು. 2 ಸೀಸನ್ ನಲ್ಲೂ ಟಾಪ್ 5 ತನಕ ಬಂದಿದ್ರು. ತಮ್ಮ ಆಟ, ನೋಟಗಳ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net