

ಬೆಂಗಳೂರು: 'ಸಿರಿಮನೆ ಪ್ರತಿಷ್ಠಾನ' ವರ್ಷಂಪ್ರತಿ ನೀಡುವ 'ಡಾ.ಸಿ.ವಿ.ವತ್ಸಲಾ ದೇವಿ ಸ್ಮಾರಕ ಪ್ರಶಸ್ತಿ' ಯನ್ನು ಈ ಬಾರಿ ಚಾಮರಾಜನಗರದ ಅನಾಥ ಮಕ್ಕಳ ಸೇವಾಸಂಸ್ಥೆ 'ದೀನಬಂಧು ಟ್ರಸ್ಟ್'ಗೆ ನೀಡಿ ಗೌರವಿಸಲು ನಿರ್ಧರಿಸಿದೆ. ಮಾ.12 ರಂದು ವಿಜಯನಗರದ ಡಾ.ಚಿದಾನಂದಮೂರ್ತಿ ಸಭಾಂಗಣದಲ್ಲಿ ಸಮಾರಂಭ ನಡೆಯಲಿದ್ದು, ಡಾ. ದೊಡ್ಡರಂಗೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಎಲ್.ಎನ್ ಮುಕುಂದರಾಜು ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕನ್ನಡದ ಲೇಖಕಿ ಮತ್ತು ಎಸ್.ಎಲ್.ಎನ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿದ್ದ ದಿವಂಗತ ಡಾ. ಸಿ.ವಿ. ವತ್ಸಲಾದೇವಿ ಅವರ ಸ್ಮರಣೆಯಲ್ಲಿ ಸಮಾಜ ಸೇವೆಯಲ್ಲಿ ನಿರತರಾದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಆಯ್ಕೆ ಮಾಡಿ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುತ್ತಿದೆ.
ಕರೊನಾ ಪಿಡುಗಿನ ಕಾರಣ ನೀಡಲಾಗದಿದ್ದ ಕಳೆದ ಮೂರು ವರ್ಷಗಳ ಮೊತ್ತದ ಜತೆಗೆ 2023ರ ಮೊತ್ತವನ್ನೂ ಸೇರಿಸಿ ಒಟ್ಟು 1 ಲಕ್ಷ ರೂ. ನಗದು ಮತ್ತು ಸ್ಮರಣ ಫಲಕವನ್ನು ದೀನಬಂಧು ಸೇವಾಸಂಸ್ಥೆಗೆ ನೀಡಲಾಗುತ್ತಿದೆ. ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಜಿ.ಎಸ್. ಜಯದೇವ ಪ್ರಶಸ್ತಿ ಸ್ವೀಕರಿಸಲಿದ್ದಾರೆ.