ಏಳು ತಿಂಗಳ ಬಳಿಕ ಪೆಟ್ರೋಲ್​-ಡೀಸೆಲ್ ಬೆಲೆಯಲ್ಲಿ ಇಳಿಕೆ: ಎಷ್ಟು, ಎಂದಿನಿಂದ ಜಾರಿ?; ಇಲ್ಲಿದೆ ಮಾಹಿತಿ

petrol
Published on

ನವದೆಹಲಿ: ದೇಶದಲ್ಲಿ ಏಳು ತಿಂಗಳ ಬಳಿಕ ವಾಹನ ಸವಾರರು, ಮಾಲೀಕರು ಸಂತೋಷ ಪಡುವ ಸಂಗತಿಯೊಂದು ಹೊರಬಿದ್ದಿದೆ. ಏಕೆಂದರೆ ಕಳೆದ ಏಳು ತಿಂಗಳಲ್ಲಿ ಇದೇ ಮೊದಲ ಸಲ ಎಂಬಂತೆ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಳಿಕೆ ಆಗಿದೆ.

ಪೆಟ್ರೋಲ್​-ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್​ಗೆ 40 ಪೈಸೆ ಇಳಿಕೆಯಾಗಿದ್ದು, ಮಂಗಳವಾರ ಬೆಳಗ್ಗೆ 6ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ತಗ್ಗಿದ ಹಾಗೂ ಕೆಲವು ಸಮಯದಿಂದ ಸ್ಥಿರವಾಗಿದ್ದ ಹಿನ್ನೆಲೆಯಲ್ಲಿ ಈ ಇಳಿಕೆ ಆಗಿದೆ. ಅಂದಹಾಗೆ ಪೆಟ್ರೋಲ್​-ಡೀಸೆಲ್​ ದರದಲ್ಲಿ ಈ ವರ್ಷದ ಏ. 7ರಂದು ಆಗಿದ್ದ ಇಳಿಕೆಯೇ ಕೊನೆ, ಅದಾದ ಬಳಿಕ ಈಗ ಮತ್ತೆ ಇಳಿಕೆ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net