ಕಾರ್ಮಿಕನ ಬಂಧನ ಖಂಡಿಸಿ ಪ್ರತಿಭಟನೆಗೆ ನಿರ್ಧಾರ

ಚಿತ್ರ 13ಎಸ್ ಡಿ ಪಿ 09
Published on

ಸಿದ್ದಾಪುರ: ವಿದ್ಯುತ್ ತಗುಲಿ ಕಾಡಾನೆ ಮೃತಪಟ್ಟ ಕಾರಣ ತೋಟದ ಕಾರ್ಮಿಕನನ್ನು ಅರಣ್ಯ ಇಲಾಖೆ ಬಂಧಿಸಿದ ಕ್ರಮವನ್ನು ರೈತ, ಕಾರ್ಮಿಕ ಸಂಘಟನೆಗಳು ಖಂಡಿಸಿವೆ. ಈ ಸಂಬಂಧ ಮಾ.14ರ ಶುಕ್ರವಾರ ಸಂಜೆ 5 ಗಂಟೆಗೆ ಪಟ್ಟಣದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ತೋಟದ ಕಾರ್ಮಿಕನನ್ನು ಬಂಧಿಸಿ ಹಲ್ಲೆ ನಡೆಸಿರುವ ಅರಣ್ಯ ಇಲಾಖೆ ತಕ್ಷಣ ಆತನನ್ನು ಬಿಡುಗಡೆ ಮಾಡಿ ಆತನ ಮೇಲಿನ ಮೊಕದ್ದಮೆ ವಾಪಸ್ ಪಡೆಯಬೇಕು ಎಂದು ರೈತ ಸಂಘದ ವಿರಾಜಪೇಟೆ ತಾಲೂಕು ಅಧ್ಯಕ್ಷ ಮಂಡೇಪಂಡ ಪ್ರವೀಣ್ ಬೋಪಯ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕಾಡಾನೆ ತೋಟಕ್ಕೆ ಬಾರದಂತೆ ತಡೆಗಟ್ಟಬೇಕು ಹಾಗೂ ವನ್ಯಮೃಗಗಳು ಮೃತಪಟ್ಟರೆ ಆಧಾರರಹಿತ ಸುಳ್ಳು ಮೊಕದ್ದಮೆ ಸೃಷ್ಟಿಸಿ ರೈತ-ಕಾರ್ಮಿಕನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಕ್ರಮ ಆಗುತ್ತಿದ್ದು, ಅರಣ್ಯ ಇಲಾಖೆಯಲ್ಲಿ ದಾಖಲಾದ ಮೊಕದ್ದಮೆ ಕೈಬಿಡಬೇಕು ಎಂದು ಒತ್ತಾಯಿಸಿ ರೈತ ಸಂಘ, ಕಾರ್ಮಿಕ ಸಂಘಟನೆಗಳು ಮನವಿ ಸಲ್ಲಿಸಲಿವೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಅಮ್ಮತ್ತಿ ಹೋಬಳಿ ಅಧ್ಯಕ್ಷ ಬಿ.ಸಿ. ಬೋಪಣ್ಣ, ಕಾರ್ಮಿಕ ಮುಖಂಡ ಭರತ್, ಜಿಲ್ಲಾ ಸಮಿತಿ ಖಜಾಂಚಿ ಸಬೀತಾ ಭೀಮಯ್ಯ ವಿಕ್ರಮ್ ಬಿದ್ದಪ್ಪ ಸಜೀವನ್, ಲಿಖಿತ್ ಸೋಮಣ್ಣ,ಸಂಚಾಲಕರಾದ ಸಿ.ಬಿ ಪೂಣಚ್ಚ,ಹರೀಶ್ ಸೋಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net