ಏ.3 ರಂದು ಮಹಿಳಾ ದಿನಾಚರಣೆಗೆ ತೀರ್ಮಾನ

ಸೋಮವಾರಪೇಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ಕನ್ನಡ ಸಿರಿ ಸ್ನೇಹ ಬಳಗದ ಸೋಮವಾರಪೇಟೆ ಘಟಕದ ಸಭೆಯಲ್ಲಿ ಸ್ನೇಹ ಬಳಗದ ಸಮಿತಿ ಅಧ್ಯಕ್ಷ ಎಚ್.ಜೆ.ಜವರಪ್ಪ ಮಾತನಾಡಿದರು. ಪ್ರೇಮಾ, ವಿಜಯಾ, ಮಲ್ಲಪ್ಪ ಇದ್ದರು.
ಸೋಮವಾರಪೇಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ಕನ್ನಡ ಸಿರಿ ಸ್ನೇಹ ಬಳಗದ ಸೋಮವಾರಪೇಟೆ ಘಟಕದ ಸಭೆಯಲ್ಲಿ ಸ್ನೇಹ ಬಳಗದ ಸಮಿತಿ ಅಧ್ಯಕ್ಷ ಎಚ್.ಜೆ.ಜವರಪ್ಪ ಮಾತನಾಡಿದರು. ಪ್ರೇಮಾ, ವಿಜಯಾ, ಮಲ್ಲಪ್ಪ ಇದ್ದರು.
Published on
ಸೋಮವಾರಪೇಟೆ: ಕನ್ನಡ ಸಿರಿ ಸ್ನೇಹ ಬಳಗದ ಸೋಮವಾರಪೇಟೆ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಭೆ, ಬಳಗದ ಅಧ್ಯಕ್ಷ ಎಚ್.ಜೆ.ಜವರಪ್ಪ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಭಾನುವಾರ ನಡೆಯಿತು.
 ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಏ.3ರಂದು ಮಹಿಳಾ ದಿನಾಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನೃತ್ಯ, ಹಾಡುಗಾರಿಕೆ, ನಾಟಕ, ಏಕಪಾತ್ರಾಭಿನಯ ಸೇರಿದಂತೆ ವಿವಿಧ ಚಟುವಟಿಕೆಯನ್ನು ನಡೆಸಲು ಹಾಗೂ ಸಹಕರಿಸುವ ಪ್ರತಿ ಸಂಘ ಸಂಸ್ಥೆಗೆ ಎರಡು ಕಾರ್ಯಕ್ರಮ ನೀಡಲು ಅವಕಾಶ ನೀಡಬೇಕು. ಇಬ್ಬರು ಸಾಧಕ ಮಹಿಳೆಯರಿಗೆ ಸನ್ಮಾನಿಸಲು ಸಭೆ ನಿರ್ಧರಿಸಿತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂಘಗಳು ತಮ್ಮ ಕಾರ್ಯಕ್ರಮದ ಬಗ್ಗೆ ಮೊದಲೇ ನೋಂದಾಯಿಸಿಕೊಳ್ಳಬೇಕೆಂದು ಅಧ್ಯಕ್ಷರು ಮನವಿ ಮಾಡಿದರು.
ಕಾರ್ಯದರ್ಶಿ ಎಲ್.ಎಂ.ಪ್ರೇಮಾ, ಖಜಾಂಚಿ ಸಿ.ಕೆ.ಮಲ್ಲಪ್ಪ, ಹಿರಿಯ ಸಾಹಿತಿ ನ.ಲ.ವಿಜಯಾ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net