ಬಂಡಿ ಮಂಟಪ ಜೀರ್ಣೋದ್ದಾರಕ್ಕೆ ನಿರ್ಧಾರ

20231208_121824
Published on

ಮೂಗೂರು: ಸರ್ಕಾರವನ್ನು ನೆಚ್ಚಿಕೊಂಡರೇ ಏನ್ನನೂ ಮಾಡಲು ಸಾಧ್ಯ ಆಗುವುದಿಲ್ಲ ಎಂಬುದನ್ನು ಮನಗಂಡ ಗ್ರಾಮಸ್ಥರು ಗ್ರಾಮದ ಶ್ರೀತ್ರಿಪುರ ಸುಂದರಿ ಅಮ್ಮನವರ ಬಂಡಿ ಮಂಟಪವನ್ನು ಸ್ಥಳೀಯ ಭಕ್ತರ ನೆರವು ಪಡೆದು ಲಕ್ಷಾಂತರ ರೂ.ವ್ಯಯಿಸಿ ಸುಸಜ್ಜಿತ ಕಟ್ಟಡ ನಿರ್ಮಾಣದ ಜತೆಗೆ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದ್ದಾರೆ.


ಮೂಗೂರು ಬಂಡಿ ಮಂಟಪ ಎಂದೇ ಕರೆಯುವ ಈ ಕಟ್ಟಡವು ನೂರಾರು ವರ್ಷಗಳ ಹಳೆಯ ಮಂಟಪವಾಗಿದ್ದು, ಛಾವಣಿಯಲ್ಲಿ ಬಿರುಕು ಬಿಟ್ಟು ಗಿಡ ಗಂಟಿಗಳು ಬೆಳೆದು ಮಳೆಗಾಲದ ಸಮಯದಲ್ಲಿ ಸೋರುತ್ತಿತ್ತು.


ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಬಂಡಿ ಬೀದಿಯ ಮುಖಂಡರು ಹಲವು ಬಾರಿ ಜನಪ್ರತಿನಿಧಿಗಳಿಗೆ ದುರಸ್ತಿಗೊಳಿಸಲು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಆರೋಪ.


ಹೀಗೆ ಬಿಟ್ಟರೆ ಮಂಟಪ ಕುಸಿದು ಬೀಳುವುದು ಖಚಿತ ಎಂಬುದನ್ನು ಅರಿತ ಸ್ಥಳೀಯ ನಿವಾಸಿಗಳು ಪಾರಂಪರಿಕ ಕಟ್ಟಡವನ್ನು ಉಳಿಸಿ, ಮೂಗೂರು ಬಂಡಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕಳೆ ತರುವ ಶ್ರೀತ್ರಿಪುರ ಸುಂದರಿ ಅಮ್ಮನವರ ಬಂಡಿ ಮಂಟಪವನ್ನು ಅಭಿವೃದ್ಧಿಪಡಿಸುವ ನಿರ್ಧಾರ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net