ಆರ್ಥಿಕ ಅಭಿವೃದ್ಧಿಗಾಗಿ ಸಾಲ ನಿರ್ವಹಣೆ ಮುಖ್ಯ

mbl fainace
ಮುಳಬಾಗಿಲು ತಾಲೂಕು ಎನ್​.ಚಮಕಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಲ್ಲಿ ಮೈಕ್ರೋ ಫೈನಾನ್ಸ್​ ಇಂಡಸ್ಟ್ರಿ ನೆಟ್​ವರ್ಕ್​ ಉಪಾಧ್ಯಕ್ಷ ಎಂ.ಎಸ್​.ಮಂಜುನಾಥ್​ ಉದ್ಘಾಟಿಸಿದರು. ಎಲ್​ ಆ್ಯಂಡ್​ ಟಿ ಫೈನಾನ್ಸ್​ನ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ವಿ.ಎಲ್​.ದೊರೆಬಾಬು, ಆರ್ಥಿಕ ಸಾಕ್ಷರತಾ ಸಲಹೆಗಾರತಿ ಅಂಬಿಕಾ ಮಂಜುನಾಥ್​ ಇದ್ದರು.
Published on

ಮುಳಬಾಗಿಲು: ಹಣಕಾಸು ಸಂಸ್ಥೆಗಳಿಂದ ಪಡೆದುಕೊಂಡಿರುವ ಸಾಲವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಾಗ ಮಾತ್ರ ಮರು ಪಾವತಿ ಮಾಡುವ ಜತೆಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ ಎಂದು ಮೈಕ್ರೋೈನಾನ್ಸ್​ ಇಂಡಸ್ಟ್ರಿ ನೆಟ್​ವರ್ಕ್​ ಉಪಾಧ್ಯಕ್ಷ ಎಂ.ಎಸ್​.ಮಂಜುನಾಥ್​ ಹೇಳಿದರು.

ಭಾರತೀಯ ರಿಸರ್ವ್​ ಬ್ಯಾಂಕ್​ನಿಂದ ಮಾನ್ಯತೆ ಪಡೆದಿರುವ ಮೈಕ್ರೋ ಫೈನಾನ್ಸ್​ ಇಂಡಸ್ಟ್ರಿ ನೆಟ್​ ವರ್ಕ್​ ಎನ್​ಬಿಸಿ ಮೈಕ್ರೋಫೈನಾನ್ಸ್​ ಸಂಸ್ಥೆಯಿಂದ ತಾಲೂಕಿನ ಎನ್​.ಚಮಕಲಹಳ್ಳಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೈಕ್ರೋ ಫೈನಾನ್ಸ್​ ಕಂಪನಿಗಳು ಭಾರತೀಯ ರಿಸರ್ವ್​ ಬ್ಯಾಂಕ್​ನಿಂದ ನಿಯಂತ್ರಿಸಲ್ಪಡುತ್ತವೆ. ಸಂಸ್ಥೆಯಿಂದ ಕಿರು ಸಾಲ, ಸಣ್ಣ ಸಾಲ, ವಿವಿಧ ರೀತಿಯ ಸಾಲ ಪಡೆದುಕೊಳ್ಳಬಹುದು. ಪ್ರಾಮಾಣಿಕವಾಗಿ ಸಾಲದ ಕಂತು ಪಾವತಿ ಮಾಡಿದರೆ ಮರು ಸಾಲ ದೊರೆಯುತ್ತದೆ. ಆರ್​ಬಿಐ ನಿಯಂತ್ರಣದಲ್ಲಿ ಇಲ್ಲದೆ ಇರುವ ಸಂಸ್ಥೆಗಳಿಗೆ ದೇಶದ&2025ರ ಕಾಯ್ದೆ ಅನ್ವಯಿಸುತ್ತದೆ ಎಂದು ಸಲಹೆ ನೀಡಿದರು.

ಮುಳಬಾಗಿಲು ತಾಲೂಕಿನ ಆರ್ಥಿಕ ಸಾಕ್ಷರತಾ ಸಲಹೆಗಾರ್ತಿ ಅಂಬಿಕಾ ಮಂಜುನಾಥ್​ ಮಾತನಾಡಿ, ಪ್ರತಿಯೊಬ್ಬರಿಗೂ ಹಣದ ಅಗತ್ಯ ಇದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಾಗ ಮಾತ್ರ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆಕ್ಸಸ್​ ಲೈವ್ಲಿಹುಡ್ಸ್​ ಸಂಸ್ಥೆಯ ಡಿಜಿಟಲ್​ ಸಖಿ ಎಲ್​.ಶ್ವೇತಾ ಮಾತನಾಡಿ, ಆರ್ಥಿಕ ಸಾಕ್ಷರತೆ ಯಾವುದೇ ವ್ಯಕ್ತಿಯ ಜೀವನದ ಪ್ರಮುಖ ಅಂಶ. ಬಜೆಟ್​ ನಿರ್ವಹಣೆ, ಹೂಡಿಕೆ, ಸಾಲದ ಆಯ್ಕೆಗಳು, ವಿಮಾ ರಕ್ಷಣೆ, ಸರ್ಕಾರಿ ವಿಮಾ ಯೋಜನೆಗಳನ್ನು ಸಂಸ್ಥೆಗಳ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ. ಸಾರ್ವಜನಿಕರು ಇದರ ಅರಿವು ಪಡೆದು, ಸದ್ಬಳಸಿಕೊಳ್ಳಬೇಕು ಎಂದರು.

ಎಲ್​ ಆ್ಯಂಡ್​ ಟಿ ಫೈನಾನ್ಸ್​ನ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ವಿ.ಎಲ್​.ದೊರೆಬಾಬು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಾಕ್ಷರತಾ ಕಾರ್ಯಕ್ರಮ ಆಯೋಜನೆ ಮಾಡುವುದರಿಂದ ಸಾರ್ವಜನಿಕರಲ್ಲಿ ಆರ್ಥಿಕ ತಿಳಿವಳಿಕೆ ಮೂಡಿಸಲು ಸಹಕಾರಿಯಾಗುತ್ತದೆ. ಸಾಲ ತೆಗೆದುಕೊಳ್ಳುವ ಮೊದಲು ತರಬೇತಿ ಪಡೆದುಕೊಂಡರೆ ಹೂಡಿಕೆ ಮಾಡಿದ ಬಂಡವಾಳಕ್ಕೆ ಲಾಭ ಗಳಿಸಬಹುದು ಎಂದು ತಿಳಿಸಿದರು.

ಮುದಿಗೆರೆ ಗ್ರಾಪಂ ಸದಸ್ಯ ಪ್ಯಾರೇಜಾನ್​, ಪಿಡಿಒ ನಾರಾಯಣಸ್ವಾಮಿ, ಮುಖಂಡರಾದ ಚಾಂದ್​ಪಾಷಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net