ಟರ್ಕಿಯಲ್ಲಿ ಭಾರಿ ಭೂಕಂಪ: ಸಾವಿನ ಸಂಖ್ಯೆ 18ಕ್ಕೆ ಏರಿಕೆ, 500ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಶಂಕೆ

turkey earthquake 25 JAN 20
Published on

ಇಸ್ತಾಂಬುಲ್: ಟರ್ಕಿಯ ಎಲಾಝಿಗ್​ ನ ಪೂರ್ವ ಪ್ರಾಂತ್ಯದ ಸಿವರ್ಸೆ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಭಾರಿ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ 6.8 ಮ್ಯಾಗ್ನಿಟ್ಯೂಡ್ ಇತ್ತು ಎಂದು ಹೇಳಲಾಗುತ್ತಿದ್ದು, ಅನೇಕ ಕಟ್ಟಡಗಳು ಕುಸಿದ ಪರಿಣಾಮ ಕನಿಷ್ಠ 18 ಜನ ಮೃತಪಟ್ಟಿದ್ದಾರೆ.

ಅಲ್ಲಿನ ಸ್ಥಳೀಯ ಕಾಲಮಾನ ರಾತ್ರಿ 8.55ಕ್ಕೆ ಈ ಭೂಕಂಪ ಸಂಭವಿಸಿದೆ. ಅಮೆರಿಕದ ಜಿಯೋಲಾಜಿಕಲ್ ಸರ್ವೇ ಪ್ರಕಾರ ಭೂಕಂಪದ ತೀವ್ರತೆ 6.7 ಮ್ಯಾಗ್ನಿಟ್ಯೂಡ್ ಇತ್ತು. 10 ಕಿ.ಮೀ. ವ್ಯಾಪ್ತಿಯಲ್ಲಿ ಈ ತೀವ್ರತೆ ಹರಡಿತ್ತು. ಸಾವು-ನೋವು ಮತ್ತು ನಾಶ-ನಷ್ಟಗಳ ಪ್ರಮಾಣ ಇನ್ನಷ್ಟೇ ಅಂದಾಜಿಸಬೇಕಾಗಿದೆ. ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆರಂಭಿಕ ವರದಿಗಳ ಪ್ರಕಾರ, 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಆದರೆ, 500ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಶಂಕೆ ಇದೆ. ಎರಡು ಪ್ರಾಂತ್ಯಗಳಲ್ಲಿ ಈ ಭೂಕಂಪ ನಾಶನಷ್ಟ ಉಂಟುಮಾಡಿದೆ ಎಂಬ ವರದಿಯೂ ಇದೆ. ಒಟ್ಟು ಹಾನಿ ಪ್ರಮಾಣದ ಮಾಹಿತಿ ಇನ್ನಷ್ಟೆ ಬಹಿರಂಗವಾಗಬೇಕಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net