

ಜೈಪುರ: ಇಲ್ಲಿನ ದೌಸಾ ಜೈಲಿನಿಂದಲೇ ಜೈಪುರ ಪೊಲೀಸ್ ಕಂಟ್ರೋಲ್ ರೂಮ್ಗೆ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿದ್ದು, ರಾಜಸ್ಥಾನ ಸಿಎಂ ಭಜಾನ್ ಲಾಲ್ ಶರ್ಮಾರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಡಾರ್ಜಿಲಿಂಗ್ನ ನಿವಾಸಿ ನೆಮೊ ಎಂಬಾತ ಕರೆ ಮಾಡಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಇನ್ನೂ ಕಂಟ್ರೋಲ್ ರೂಮ್ಗೆ ಬಂದ ಕರೆಯನ್ನು ಪತ್ತೆಹಚ್ಚಿದಾಗ ಜೈಲಿನ ಒಳಗಿನಿಂದ ದೂರವಾಣಿ ಕರೆ ಬಂದಿರುವುದು ಗೊತ್ತಾಗಿದೆ. ಸದ್ಯ ಈ ವಿಷಯ ಪೊಲೀಸರನ್ನೇ ಬೆಚ್ಚಿಬೀಳಿಸಿದೆ.
ಇದನ್ನೂ ಓದಿ: ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ದಿನೇಶ್ ಮೊಗ್ರ ಆಯ್ಕೆ
ಈ ಕುರಿತು ದೌಸಾ ಎಸ್.ಪಿ. ರಂಜಿತಾ ಶರ್ಮಾ ಭಾನುವಾರ (ಜು.28) ಜೈಲಿನ ಆವರಣದಲ್ಲಿ ಶೋಧ ನಡೆಸಿ, 10 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಫೋನ್‌ಗಳಲ್ಲಿ ಒಂದನ್ನು ನೆಮೊ ಮತ್ತು ಮತ್ತೊಂದು ಮತ್ತೋರ್ವ ಕೈದಿಯಿಂದ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ ಹೂತಿಟ್ಟಿದ್ದ ಎಂಟು ಮೊಬೈಲ್ ಫೋನ್‌ಗಳನ್ನು ಪೊಲೀಸರು ಪತ್ತೆಹಚ್ಚಿರುವುದಾಗಿ ವರದಿಯಾಗಿದೆ.
ಈ ಸಂಬಂಧ ಕಾರಾಗೃಹದ ಡಿ.ಐ.ಜಿ. ಮೋನಿಕಾ ಅಗರ್ವಾಲ್ ಮೂವರು ಜೈಲಾಧಿಕಾರಿಗಳಾದ ಹಂಗಾಮಿ ಸೂಪರಿಂಟೆಂಡೆಂಟ್ ಕೈಲಾಶ್ ಶರ್ಮಾ, ಜೈಲರ್ ಬಿಹಾರಿ ಲಾಲ್ ಮತ್ತು ಹೆಡ್ ವಾರ್ಡರ್ ಅವಧೇಶ್ ಕುಮಾರ್ ಅವರನ್ನು ಅಮಾನತುಗೊಳಿದ್ದಾರೆ. ನೆಮೊ ಎಂಬ ಕೈದಿಯನ್ನು 2017ರಿಂದ ಜೈಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ ಆತನನ್ನು ದೌಸಾ ಜೈಲಿಗೆ ವರ್ಗಾಯಿಸಲಾಯಿತು ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).