ಮಣ್ಣಿನಡಿ ಸಿಲುಕಿ ಮೂವರ ಮೃತ್ಯು

sul- mar25- DEATH web
Published on

ಸುಳ್ಯ: ಸುಳ್ಯದ ಗುರುಂಪು ಬಳಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಮಣ್ಣು ಕುಸಿದು ಮಣ್ಣಿನಡಿಗೆ ಸಿಲುಕಿ ಮೂರು ಮಂದಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಇಬ್ಬರು ಪುರುಷರು ಹಾಗು ಓರ್ವ ಮಹಿಳೆ ಮೃತಪಟ್ಟಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿಯ ಸೋಮಶೇಖರ ರೆಡ್ಡಿ(45), ಪತ್ನಿ ಶಾಂತಾ(40) ಹಾಗೂ ಮತ್ತೊರ್ವ ಪುರುಷ ಮೃತಪಟ್ಟಿದ್ದಾರೆೆ.ಇಲ್ಲಿ ಏಳು ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು.

ಮೃತದೇಹವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಅಗ್ನಿಶಾಮಕ ದಳ, ಪೊಲೀಸ್ ಮತ್ತಿತರರು ಕಾರ್ಯಾಚರಣೆ ನಡೆಸಿ ಮಣ್ಣಿನಡಿ ಸಿಲುಕಿ ಕೊಂಡವರನ್ನು ಹೊರ ತೆಗೆದು ಆಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net