ಮತ್ತಷ್ಟು ಡಿಸಿಎಂ ಸೃಷ್ಟಿ; ಮುಂದುವರಿದ ಸಚಿವರ ಚರ್ಚೆ, ಸಂತೋಷ್ ಲಾಡ್ ತಟಸ್ಥ!

Congress
Published on

ಬೆಂಗಗಳೂರು: ಮೂರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ ಕಾರ್ಮಿಕ‌ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದು, ಹೈಕಮಾಂಡ್ ಅಭಿಪ್ರಾಯವೇ ನಮ್ಮ ಅಭಿಪ್ರಾಯವಾಗಿದೆ ಎಂದಿದ್ದಾರೆ.

ಪಕ್ಷಕ್ಕೆ ಇದು ಅನುಕೂಲಕರವೆಂದು ಹೈಕಮಾಂಡ್ ನಿರ್ಧರಿಸಿದರೆ ಅವರಿಗೆ ಬಿಟ್ಟಿದ್ದು. ಪಕ್ಷಕ್ಕೆ ಅಗತ್ಯವಿದೆ ಎಂದು ಕಂಡುಬಂದರೆ ನಿರ್ಧರಿಸಬಹುದು. ನಮಗೆ ಹೈಕಮಾಂಡ್ ಸುಪ್ರೀಂ. ಅವರು ಏನೇ ನಿರ್ಧಾರ ಮಾಡಿದರೂ ಸ್ವಾಗತಿಸುತ್ತೇವೆ ಎಂದರು.

ಸಹಕಾರ ಸಚಿವ ಕೆ.ಎನ್ ರಾಜಣ್ಣ ಕಳೆದ ವಾರ ನೀಡಿದ ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕೆಂಬ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ಸಂಪುಟದ ಸಾಕಷ್ಟು ಮಂದಿ ರಾಜಣ್ಣ ಅಭಿಪ್ರಾಯಕ್ಕೆ ದನಿಗೂಡಿದ್ದಾರೆ.

ಗೃಹ ಸಚಿವ ಪರಮೇಶ್ವರ, ಸತೀಶ್ ಜಾರಕಿಹೊಳಿ, ನಾಗೇಂದ್ರ ಕೂಡ ಒಲವು ವ್ಯಕ್ತಪಡಿಸಿದ್ದರು. ಇದೀಗ ಸಂತೋಷ್ ಲಾಡ್ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎನ್ನುವ ಮೂಲಕ‌ ತಟಸ್ಥ ಅಭಿಪ್ರಾಯ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net