ಉತ್ತಮ ಸೇವೆ ಒದಗಿಸುವುದೇ ಧ್ಯೇಯ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿಕೆ

23-klr-6 dcc bank news photo
Published on

ಕೋಲಾರ :  ಸಹಕಾರಿ ವ್ಯವಸ್ಥೆ ಎಂದರೆ ಬುಕ್ ಅಡ್ಜೆಸ್ಟ್‌ಮೆಂಟ್ ಎಂಬ ಅಪವಾದವಿದ್ದು, ಇದನ್ನು ದೂರ ವಾಡಲು ಡಿಸಿಸಿ ಬ್ಯಾಂಕ್ ಹಾಗೂ ಇದರಡಿ ಬರುವ ಸೊಸೈಟಿಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ಭಾರತೀಯ ರಿಸರ್ವ್ ಬ್ಯಾಂಕಿನಿಂದ ಮಂಜೂರಾಗಿರುವ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬುಧವಾರ ಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಅನಾವರಣಗೊಳಿಸಿ ವಾತನಾಡಿ, ವಾಣಿಜ್ಯ ಬ್ಯಾಂಕುಗಳಿಗಿಂತ ಅತ್ಯುತ್ತಮ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುವ ಧ್ಯೇಯ ನಮ್ಮದಾಗಿದ್ದು, ಗ್ರಾಹಕರು ಠೇವಣಿ ಇಡುವ ಮೂಲಕ ಬ್ಯಾಂಕಿಗೆ ಶಕ್ತಿ ತುಂಬಬೇಕು ಎಂದರು.

ಪಾರದರ್ಶಕ ಆಡಳಿತಕ್ಕಾಗಿ ಆರ್‌ಬಿಐ ಒದಗಿಸಿರುವ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತೇವೆ, ಜತೆಗೆ ಗ್ರಾಹಕರೂ ಇದರ ಪ್ರಯೋಜನ ಪಡೆಯುವ ಮೂಲಕ ಬ್ಯಾಂಕಿನ ಉನ್ನತಿ ಹೆಚ್ಚಿಸಬೇಕು ಎಂದು ಕೋರಿದರು.

ಸವಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೇವೆ ಸಿಗಬೇಕೆಂಬುದು ನನ್ನ ಮತ್ತು ಆಡಳಿತ ಮಂಡಳಿ ನಿರ್ದೇಶಕರ ಆಸೆ. ಈಗಾಗಲೆ ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್ ಸಹಯೋಗದಲ್ಲಿ ಅನೇಕ ಸುಧಾರಣೆ ವಾಡಲಾಗಿದೆ, ನಮ್ಮ ಅವಧಿಗಿಂತ ಮುಂಚೆ ಬ್ಯಾಂಕಿನಲ್ಲಿ ಆಗಿರುವ ಲೋಪಗಳಿಂದ ಜನರು ಬ್ಯಾಂಕಿನ ಬಗ್ಗೆ ಬೇಸತ್ತು ದೂರ ಸರಿದಿದ್ದರೂ ಈಗ ಬ್ಯಾಂಕಿನ ಬಗ್ಗೆ ಅವರಲ್ಲಿ ನಂಬಿಕೆ ಮೂಡಿದೆ, ಇದನ್ನು ಉಳಿಸಿಕೊಂಡು ಹೋಗುವುದಕ್ಕೆ ಪ್ರಾವಾಣಿಕ ಪ್ರಯತ್ನ ನಡೆದಿದೆ ಎಂದರು.

ಒಳ್ಳೆ ಕೆಲಸ ವಾಡುವವರನ್ನು ಹಳದಿ ಕಣ್ಣಿನಿಂದ ನೋಡುವುದು ತಪ್ಪು, ಏನೇ ಸಂಶಯಗಳಿದ್ದರೂ ಬ್ಯಾಂಕಿಗೆ ಬಂದು ವಿಚಾರಿಸಿ ಬಗೆಹರಿಸಿಕೊಳ್ಳುವುದಕ್ಕೆ ಮುಕ್ತ ಅವಕಾಶವಿದೆ. ಒಂದು ವೇಳೆ ನಾವು ತಪ್ಪು ವಾಡಿದ್ದರೆ ನಬಾರ್ಡ್, ಅಪೆಕ್ಸ್ ಬ್ಯಾಂಕ್ ಹಾಗೂ ಆರ್‌ಬಿಐನಿಂದ ಸಹಾಯ ದೊರೆಯುತ್ತಿರಲಿಲ್ಲ ಎಂದು ವಿರೋಧಿಗಳಿಗೆ ವಾರ್ಮಿಕವಾಗಿ ಉತ್ತರಿಸಿದರು.

ಈಗಾಗಲೆ ಬ್ಯಾಂಕ್ ನೆಫ್ಟ್, ಆರ್‌ಟಿಜಿಎಸ್ ಪೇಮೆಂಟ್ ಸಿಸ್ಟಮ್, ಬೆನಿಫಿಟ್ ಟ್ರಾನ್ಸ್‌ಫರ್, ಆಧಾರ್ ಬೇಸ್‌ಡ್ ಪೇಮೆಂಟ್, ಎಸ್‌ಎಂಎಸ್ ಅಲರ್ಟ್, ರೂಪೆ ಕಾರ್ಡ್ ನೀಡಿಕೆ, ಚೆಕ್ ಟ್ರಾನ್ಸಕ್ಷನ್ ಸಿಸ್ಟಮ್, ಮೈಕ್ರೋ ಎಟಿಎಂ, ಮೊಬೈಲ್ ಎಟಿಎಂ ವ್ಯಾನ್ ಸೇರಿ ಎಲ್ಲ ಸೌಲಭ್ಯ ಒದಗಿಸುತ್ತಿದೆ, ಇಂಟರ್‌ನೆಟ್ ಬ್ಯಾಂಕಿಂಗ್ ಅನುಷ್ಠಾನ ತ್ವರಿತಗತಿಯಲ್ಲಿ ವಾಡಲಾಗುತ್ತಿದೆ, ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ದೊರೆತಿರುವುದರಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಿಸಿದರು.

5 ಲಕ್ಷ ಮಹಿಳೆಯರು, 35 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಸಾಲ ಸೌಲಭ್ಯ ಒದಗಿಸಿದ ಹೆಮ್ಮೆ ನಮಗಿದೆ, ಇದೀಗ ಡಿಜಿಟಲೀಕರಣದ ಮೂಲಕ ಸವಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೇವೆ ತಲುಪಿಸಲು ದಾಪುಗಾಲು ಇಡುತ್ತಿದ್ದೇವೆ ಎಂದರು.

ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಅನಿಲ್ ಕುವಾರ್, ಹನುಮಂತರೆಡ್ಡಿ, ಕೆ.ವಿ.ದಯಾನಂದ್, ವೆಂಕಟರೆಡ್ಡಿ, ನಾಗಿರೆಡ್ಡಿ, ಗೋವಿಂದರಾಜ್, ಬ್ಯಾಂಕಿನ ಎಂಡಿ ವೆಂಕಟೇಶಪ್ಪ, ವತ್ತಿಪರ ನಿರ್ದೇಶಕ ಮಹಮದ್ ಇಲಿಯಾಸ್, ಮುಖಂಡ ಎಸ್.ವಿ.ಸುಧಾಕರ್, ಬ್ಯಾಂಕಿನ ಅಧಿಕಾರಿಗಳಾದ ಪದ್ಮಮ್ಮ ಹ್ಯಾರೀಸ್, ಜಬ್ಬಾರ್ ಇತರರಿದ್ದರು.

ಏಳೂವರೆ ವರ್ಷಗಳ ಹಿಂದೆ ನಬಾರ್ಡ್ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಅನುವಾನದಿಂದ ನೋಡಿದ್ದರು. ಬ್ಯಾಂಕಿನ ಅಭಿವದ್ಧಿಗೆ ನೆರವು ನೀಡಲು ಹಿಂದೇಟು ಹಾಕಿದ್ದರು, ಆದರೆ ನಮ್ಮಲ್ಲಿನ ಬದ್ಧತೆ ಪರಿಗಣಿಸಿ ಹಂತ-ಹಂತವಾಗಿ ಸಹಾಯ ವಾಡಿದ್ದಾರೆ, ನಾವೂ ಅಧಿಕಾರಿಗಳ ನಂಬಿಕೆ ಮತ್ತು ವಿಶ್ವಾಸಕ್ಕೆ ದಕ್ಕೆಯಾಗದ ರೀತಿಯಲ್ಲಿ ನಡೆದುಕೊಂಡಿದ್ದೇವೆ, ಹಾಗಾಗಿ ಸವಲತ್ತು ಹರಿದು ಬರುತ್ತಿದೆ. ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net