ಸಿಮ್ಸ್ ಬೋಧನಾ ಆಸ್ಪತ್ರೆಗೆ ಡಿಸಿ ಭೇಟಿ

gurudutt
ಶಿವಮೊಗ್ಗ ಸಿಮ್ಸ್ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿ ಬಗ್ಗೆ ಗುರುದತ್ತ ಹೆಗಡೆ ಮಾಹಿತಿ ಪಡೆದುಕೊಂಡರು. ಡಾ.ವಿರೂಪಾಕ್ಷಪ್ಪ, ಡಾ.ತಿಮ್ಮಪ್ಪ ಉಪಸ್ಥಿತರಿದ್ದರು
Published on

ಶಿವಮೊಗ್ಗ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಂಗಳವಾರ ಸಿಮ್ಸ್ ಬೋಧನಾ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ವಿಭಾಗಗಳಲ್ಲಿ ಪರಿಶೀಲಿಸಿದರು. ಸಂಬಂಧಪಟ್ಟ ವಿಭಾಗಗಳ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿನ ಮೂಲಸೌಕರ್ಯ, ಚಿಕಿತ್ಸೆಯ ಗುಣಮಟ್ಟ ಮುಂತಾದ ಸಂಗತಿಗಳ ಕುರಿತು ಸಮಾಲೋಚನೆ ನಡೆಸಿದರು.

ರಕ್ತನಿಧಿಯ ರಕ್ತ ಶೇಖರಣಾ, ರಕ್ತ ವಿಭಜನಾ ಘಟಕ, ಸೀರಂ ಪರೀಕ್ಷಾ ಕೊಠಡಿ, ಫ್ಲೆಬೊಟಮಿ ವಿಭಾಗ, ರಕ್ತ ಸಂಬಂಧಿತ ಖಾಯಿಲೆಗಳ ಹಗಲು ಆರೈಕೆ ಕೇಂದ್ರ, ಐಸಿಸಿಯು ಘಟಕ, ಪ್ರಸೂತಿ ವಿಭಾಗ, ಎನ್‌ಐಸಿಯು, ತಾಯಿ ಎದೆಹಾಲು ಶೇಖರಣಾ ಕೇಂದ್ರ ಅಮೃತಧಾರೆ, ಶಸ್ತ್ರ ಚಿಕಿತ್ಸೆ ಕೊಠಡಿ, ಇತರೆ ವಿಭಾಗಗಳಿಗೆ ತೆರಳಿ ವೀಕ್ಷಣೆ ಮಾಡಿದರು.
ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿ ವೀಕ್ಷಿಸಿದರು. ಅದಕ್ಕೆ ಸಂಬಂಧಿಸಿದ ಭೂಮಿಯ ವಿಚಾರದಲ್ಲಿ ಇರುವ ಗೊಂದಲಗಳ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟನೆ ಪಡೆದುಕೊಂಡರು. ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಸರ್ಜನ್ ಡಾ.ಸಿದ್ದನಗೌಡ ಪಾಟೀಲ್ ಮುಂತಾದವರೊಂದಿಗೆ ಜಿಲ್ಲಾಧಿಕಾರಿ ಸಮಾಲೋಚನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net