ಇಂಜನಿಯರ್ ಅಮಾನತ್ತುಗೊಳಿಸಲು ಸರ್ಕಾರಕ್ಕೆ ಡಿಸಿ ಶಿಫಾರಸ್ಸು

klr-cmc-storywebp
Published on

ಕೋಲಾರ: ನಗರಸಭೆಯ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತ ಎನ್.ಆರ್.ದಿಲೀಪ್ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿದ್ದು, ಈ ಕೂಡಲೇ ಅವರನ್ನು ಅಮಾನತ್ತುಗೊಳಿಸಬೇಕು ಎಂದು ಸರ್ಕಾರಕ್ಕೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಶಿಫಾರಸ್ಸು ಮಾಡಿದ್ದಾರೆ.

ನಗರಸಭೆಯ ಘನತ್ಯಾಜ್ಯ ನಿರ್ವಹಣೆಗೆ ಸಂಬAಽಸಿದAತೆ ಸಾರ್ವಜನಿಕರಿಂದ ಪದೇಪದೆ ದೂರುಗಳು ಸಹಾಯಕ ಕಾರ್ಯಪಾಲಕ ಇಂಜನಿಯರ್ ಎನ್.ಆರ್.ದಿಲೀಪ್ ವಿರುದ್ಧ ಸಲ್ಲಿಕೆಯಾಗುತ್ತಿದ್ದವು. ಸ್ವಚ್ಛ ಭಾರತ್ ಮೀಷನ್-೧.೦ ಯೋಜನೆಯಡಿಯಲ್ಲಿ ಸ್ವಚ್ಛತಾ ಸಲಕರಣೆಗಳ ಖರೀದಿಯಲ್ಲಿ ಚಾರ್ಜಿಂಗ್ ಪಾಯಿಂಟ್-೨ಕ್ಕೆ *೬.೭೭ ಲಕ್ಷಕ್ಕೆ ಅನುಮೋದನೆಯನ್ನು ೨೦೨೪ರ ಜನವರಿ ೧ರಂದು ನೀಡಲಾಗಿದ್ದು, ಎಸ್‌ಆರ್ ದರ ಲಭ್ಯವಿಲ್ಲದ ಕಾರಣ ಕೊಟೇಷನ್ ಕರೆದು ದರಗಳನ್ನು ಸಕ್ಷಮ ಪ್ರಾಽಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆಯಬೇಕಿತ್ತು, ಆದರೆ ಯಾವುದೇ ರೀತಿ ಅನುಮೋದನೆ ಪಡೆಯದೆ ಪ್ಯಾಕೇಜ್ ಟೆಂಡರ್‌ನಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆಗೆ ಬೇಕಾಗಿರುವ ಒಂದು ಬ್ಯಾಕ್ ಹೋ ಲೋಡರ್-೧, ಕಾಂಪ್ಯಾಕ್ಟರ್-೧, ಸಿಸಿ ಕ್ಯಾಮರಾ-೨, ಟ್ರಾ÷್ಯಕ್ಟರ್ ಇಂಜಿನ್-೨ ಇವುಗಳನ್ನು ಒಂದೇ ಟೆಂಡರ್‌ನಲ್ಲಿ ಕರೆದಿರುವುದಾಗಿ ತೋರಿಸಿ ಉಲ್ಲಂಘಿಸಿರುವುದು ಕಂಡು ಬಂದಿದೆ. ಅಲ್ಲದೆ ಟೆಂಡರ್‌ನಲ್ಲಿ ಭಾಗವಹಿಸಿರುವ ಬಿಡ್‌ದಾರರ ಯಾವುದೇ ದಾಖಲೆಗಳು ಲಭ್ಯವಿಲ್ಲ. ಜಿಲ್ಲಾಽಕಾರಿ ಅಧ್ಯಕ್ಷತೆಯಲ್ಲಿ ಎಸ್‌ಡಬ್ಲ್ಯುಎಂ ಸಮಿತಿಯಲ್ಲಿ ಅನುಮೋದನೆ ಪಡೆಯದೇ ನೇರವಾಗಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿರುವುದೂ ಸಾಬೀತಾಗಿದೆ.

ಎಲೆಕ್ಟ್ರಿಕಲ್ ಆಟೋ ಟಿಪ್ಪರ್-6, ಪುಷ್‌ಕಾರ್ಟ್-15, ವೀಲ್ ಬಾರ್ -12 ಖರೀದಿಗೂ ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆಯದೇ ಇಂಜಿನಿಯರ್ ದಿಲೀಪ್ ಟೆಂಡರ್ ಕರೆದಿದ್ದರು ಎನ್ನಲಾಗಿದೆ.

ಘನ ತ್ಯಾಜ್ಯ ವಸ್ತುಗಳ ನಿರ್ವಹಣೆಯ ಘಟಕಕ್ಕೆ 80 ಟಿಪಿಡಿ ಸಾಮರ್ಥ್ಯದ ಕಾಂಪೋಸ್ಟ್ ಸಂಸ್ಕರಣಾ ಯಂತ್ರವನ್ನು ಅಳವಡಿಸಿದ್ದು, ಎನ್‌ಜಿಡಿ 606/2018ರ ಆದೇಶಗಳ್ವಯ ಪ್ರತಿ ವರ್ಷ ಅಫಿಡವಿಟ್ ಸಲ್ಲಿಸಬೇಕಾಗಿರುವುದರಿಂದ ಟ್ರಾನ್ಸ್ಪೋರ್ಟೇಷನ್, ಕನೆಕ್ಷನ್ ಮತ್ತು ಸಕ್ರಿಗೇಷನ್‌ನ್ನು ಸರಿಯಾದ ರೀತಿಯಲ್ಲಿ ಮಾಡುವಲ್ಲಿ ವಿಫಲರಾಗಿದ್ದಾರೆ. ಇದುವರೆಗೂ ಘನ ತ್ಯಾಜ್ಯ ವಸ್ತು ನಿರ್ವಹಣೆಯ ಘಟಕಕ್ಕೆ ಪರಿಸರ ಮಾಲಿನ್ಯ ಅಧಿಕಾರಿಗಳಿಂದ ಎಂಎಸ್‌ಡಬ್ಲ್ಯು ಅರ್ಹತೆಯ ಅನುಮತಿ ಪಡೆಯದೇ ಇರುವುದರಿಂದ ಘಕಟವನ್ನು ಪ್ರಾರಂಭಿಸಲು ಸಾಧ್ಯವಾಗಿಲ್ಲ. ಹಲವು ಬಾರಿ ಸಾಮಾನ್ಯ ಸಭೆಗಳಲ್ಲಿ ಮೌಖಿಕವಾಗಿ ಸೂಚಿಸಿದ್ದರೂ ಯಾವುದೇ ರೀತಿಯ ಕ್ರಮವಹಿಸಿರುವುದಿಲ್ಲ.

ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸುಮಾರು * 1 ಕೋಟಿ ವೆಚ್ಚದಲ್ಲಿ 8 ಟಿಪಿಡಿ ಸಾಮರ್ಥ್ಯದ ಕಾಂಪೋಸ್ಟ್ ಸಂಸ್ಕರಣಾ ಯಂತ್ರವನ್ನು ಅಳವಡಿಸಿದ್ದು, ಇದುವರೆಗೂ ನಗರದಲ್ಲಿನ ತ್ಯಾಜ್ಯವನ್ನು ಘಟಕಕ್ಕೆ ತಲುಪಿಸಿ ನಿರ್ವಹಣೆ ಮಾಡುವಲ್ಲಿ ಕೂಡ ಇಂಜಿನಿಯರ್ ವಿಫಲರಾಗಿದ್ದಾರೆ. ಜವಾಬ್ದಾರಿಯುವ ಸ್ಥಾನದಲ್ಲಿ ಇದ್ದರೂ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿರುವುದರಿಂದ ಅಮಾನತ್ತುಗೊಳಿಸುವಂತೆ ಜಿಲ್ಲಾಧಿಕಾರಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

ಬಾಕ್ಸ್..

* ಪ್ರಕರಣದ ಮೇಲೆ ಬೆಳಕು ಚೆಲ್ಲಿದ ವಿಜಯವಾಣಿ

ಸ್ವಚ್ಛ ಭಾರತ್ ಮಿಷನ್-1.೦ ಯೋಜನೆಯಡಿ ನಗರಸಭೆಯಿಂದ ಸ್ವಚ್ಛತಾ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ?, ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ಬೆಳಕು ಚೆಲ್ಲಲಾಗಿತ್ತು. ಈ ಬಗ್ಗೆ ಸಾಮಾನ್ಯ ಸಭೆಯಲ್ಲೂ ವ್ಯಾಪಕ ಚರ್ಚೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸದಸ್ಯರು ಒತ್ತಾಯಿಸಿದ್ದರು.

ಅಗತ್ಯ ಸಲಕರಣೆಗಳ ಖರೀದಿಗೆ ಜೇಮ್ ಪೋರ್ಟಲ್ ಮೂಲಕ (ವರ್ನಮೆಂಟ್ ಇ ಮಾರ್ಕೆಂಟಿಗ್) ಟೆಂಡರ್ ಕರೆಯಲಾಗಿತ್ತು. ಬೆಂಗಳೂರಿನ ಸಂಸ್ಥೆ ಟೆಂಡರ್ ಪಡೆದುಕೊಂಡಿತ್ತು. ಆದರೆ, ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಖರೀದಿ ಮಾಡುವ ವೇಳೆ ಎಲ್ಲ ವಾಹನಗಳು ಹಾಗೂ ಯಂತ್ರಗಳನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಗೆ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ಬಾಕ್ಸ್

ಯಾವುದಕ್ಕೆ ಎಷ್ಟೆಷ್ಟು ಹೆಚ್ಚುವರಿ ಬಿಲ್?

2 ಬುಲೆಟ್ ಸಿಸಿ ಕ್ಯಾಮರಾಗೆ ಮಾರುಕಟ್ಟೆ ಬೆಲೆ 10 ಸಾವಿರ ರೂ. ಇದ್ದರೆ ಬಿಲ್ ಪಾವತಿ ಮಾಡಿರುವುದು 6.5 ಲಕ್ಷ ರೂ., 34 ಸಾವಿರ ರೂ. ಬೆಲೆಯ 2 ಚಾರ್ಜಿಂಗ್ ಪಾಯಿಂಟ್‌ಗೆ 8 ಲಕ್ಷ ರೂ. ಪಾವತಿ ಮಾಡಲಾಗಿದೆ. 1.20 ಲಕ್ಷ ಬೆಲೆಯ 15 ಪುಶ್ ಕಾರ್ಟ್ಗೆ ಇಲ್ಲಿ 5.5 ಲಕ್ಷ ರೂ., 60 ಲಕ್ಷ ಬೆಲೆಯ 6 ಎಲೆಕ್ಟ್ರಿಕಲ್ ಮಿನಿ ಟಿಪ್ಪರ್‌ಗೆ 98 ಲಕ್ಷ ರೂ. ನೀಡಲಾಗಿದೆ. 25 ಲಕ್ಷ ಬೆಲೆ ಬಾಳುವ ರೆಪ್ಯೂಸ್ ಕಾಂಪ್ಯಾಕ್ಟರ್‌ಗೆ 51 ಲಕ್ಷ ರೂ. ಬಿಲ್ ಪಾವತಿ ಮಾಡಲಾಗಿದ್ದು, ಇದರ ಇನ್‌ವಾಯ್ಸ್ ಬಿಲ್ `ವಿಜಯವಾಣಿ'ಗೆ ಲಭ್ಯವಾಗಿದೆ. ̧1̧6500 ರೂ. ಬೆಲೆಯಿರುವ ಒಂದು ಇವಿ ಚಾರ್ಜರ್‌ಗೆ ಹೆಚ್ಚುವರಿಯಾಗಿ 3.38 ಲಕ್ಷ ರೂ. ಹೀಗೆ ಎರಡು ಚಾರ್ಜರ್‌ಗಳಿಗೆ ಒಟ್ಟು 7.99 ಲಕ್ಷ ರೂ. ಪಾವತಿ ಮಾಡಲಾಗಿದ್ದು ಟೆಂಡರ್‌ನಲ್ಲಿ ಉಲ್ಲಂಘನೆ ಎಸಗಿರುವುದು ಸಾಬೀತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net