ಪರೀಕ್ಷೆಯಲ್ಲಿ 92% ಗಳಿಸಿದ್ದ ಬಾಲಕ: 15 ದಿನಗಳ ನಂತರ ಆತ್ಮಹತ್ಯೆ, ಕಾರಣ ನಿಗೂಢ

writting
Published on

ಮುಂಬೈ: 15 ವರ್ಷದ ಬಾಲಕನೊಬ್ಬ 23ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ವರ್ತಕ್ ನಗರ ಪ್ರದೇಶದ ಬಹುಮಹಡಿ ಕಟ್ಟಡದಲ್ಲಿ ವಾಸಿಸುತ್ತಿದ್ದ 10ನೇ ತರಗತಿ ಬಾಲಕನೊಬ್ಬ ಮಹಾರಾಷ್ಟ್ರ ಶಿಕ್ಷಣ ಮಂಡಳಿಯ ಎಸ್‌ಎಸ್‌ಸಿ (10ನೇ ತರಗತಿ) ಪರೀಕ್ಷೆಯಲ್ಲಿ ಶೇಕಡಾ 92 ಅಂಕಗಳನ್ನು ಗಳಿಸಿದ್ದ. ಕಳೆದ ವಾರ ಈ ಫಲಿತಾಂಶ ಪ್ರಕಟಿಸಲಾಗಿತ್ತು. ಗುರುವಾರ ರಾತ್ರಿ 2ರ ಸುಮಾರಿಗೆ ಕಟ್ಟಡದ ನಿವಾಸಿಗಳು ಏನೋ ಬಿದ್ದ ಹಾಗೆ ಶಬ್ದವೊಂದನ್ನು ಕೇಳಿದ್ದರು. ಗಾಬರಿಯಾಗಿ ಹೊರಬಂದು ನೋಡಿದಾಗ ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಂಡಿದ್ದಾರೆ.

ಕೂಡಲೇ ಪೊಲೀಸರಿಗೆ ಈ ಸುದ್ದಿಯನ್ನು ತಿಳಿಸಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕನ ಸಾವಿನ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಬಾಲಕನ ಗುರುತನ್ನು ಗುಪ್ತವಾಗಿ ಇಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net