ದಾವಣಗೆರೆ, ಬಾಗಲಕೋಟೆ, ಧಾರವಾಡಕ್ಕೆ ಹೆಚ್ಚು ಪ್ರಶಸ್ತಿ

40
Published on


ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ 17 ವರ್ಷ ವಯೋಮಿತಿಯೊಳಗಿನ ಬಾಲಕರ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ದಾವಣಗೆರೆ, ಬಾಗಲಕೋಟೆ ಹಾಗೂ ಧಾರವಾಡ ಕುಸ್ತಿಪಟುಗಳು ಹೆಚ್ಚು ಪ್ರಶಸ್ತಿ ಗೆಲ್ಲುವ ಮೂಲಕ ಪ್ರಾಬಲ್ಯ ಸಾಧಿಸಿದ್ದಾರೆ.
ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕುಸ್ತಿಯ 65 ಕೆ.ಜಿ.ವಿಭಾಗದಲ್ಲಿ ದಾವಣಗೆರೆಯ ಅರ್ಜುನ್ ಎಂ.ಕೋರವರ ಪ್ರಥಮ ಸ್ಥಾನ ಹಾಗೂ ಪೈ.ಎಂ.ಸತ್ಯರಾಜ್ ದ್ವಿತೀಯ ಸ್ಥಾನ ಪಡೆದರು. ಬಾಗಲಕೋಟೆಯ ಪೈ.ಸಂಜೀವ್ ಪಿ.ಪೂಜಾರಿ ಮತ್ತು ಧಾರವಾಡದ ವಿಕಾಸ್ ವಿಕಾಸ್ ತೃತೀಯ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net