ರಣಬೀರ್​ ಕಪೂರ್ ಜತೆ ಡೇಟಿಂಗ್​!: ಹಲವು ವರ್ಷಗಳ ಬಳಿಕ ಮೌನ ಮುರಿದ ನಟಿ ಅಮೀಷಾ ಪಟೇಲ್ | Dating

dk - 2025-05-03T142925.313
Published on

Dating : ಬಾಲಿವುಡ್​ ನಟ ರಣಬೀರ್​ ಕಪೂರ್ ಹಾಗೂ ಪ್ರೀತಿ ಜಿಂಟಾ ಅವರ ಮಾಜಿ ಗೆಳೆಯ ಮತ್ತು ಉದ್ಯಮಿ ನೆಸಾ ವಾಡಿಯಾ ಅವರೊಂದಿಗಿನ ಡೇಟಿಂಗ್​ ಬಗ್ಗೆ ​ನಟಿ ಅಮೀಷಾ ಪಟೇಲ್​​ ಇದೀಗ ಮೌನ ಮುರಿದಿದ್ದಾರೆ.

ಹೌದು, ಬಾಲಿವುಡ್​ನ ಮೊಸ್ಟ್​ ಆ್ಯಟ್ರಾಕ್ವಿವ್​​ ಬ್ಯೂಟಿಫುಲ್​ ನಟಿ ಈ ಅಮೀಷಾ ಪಾಟೇಲ್​. ಈಕೆ ವೃತ್ತಿ ಜೀವನಕ್ಕಿಂತ ವೈಯಕ್ತಿಕ ವಿಚಾರಕ್ಕೆ ಪದೇಪದೆ ಸುದ್ದಿಯಾಗುತ್ತಲೇ ಇರುತ್ತಾರೆ. ಈ ರಣಬೀರ್​ ಕಪೂರ್​ ಸೇರಿದಂತೆ ಬಾಲಿವುಡ್​ ಜನಪ್ರೀಯ ನಟರೊಂದಿಗೆ ಅಮೀಷಾ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಗುಸುಗುಸು ಕೇಳುತ್ತಲೇ ಇತ್ತು. ಇದಕ್ಕೆಲ್ಲ ಇದೀಗ ಅಂತ್ಯವಾಡಿದ್ದಾರೆ.

ಈ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮೀಷಾ ಪಟೇಲ್,'' ನೆಸ್ ಮತ್ತು ನಾನು ಮೂರು ತಲೆಮಾರುಗಳ ಕುಟುಂಬ ಸ್ನೇಹಿತರು. ಅವರ ಅಜ್ಜ, ನನ್ನ ಅಜ್ಜ, ನಮ್ಮ ಪೋಷಕರು ಮತ್ತು ಈಗ ನಾವು - ನಾವೆಲ್ಲರೂ ಒಂದೇ ದಕ್ಷಿಣ ಬಾಂಬೆ ಮೂಲದವರು. ನೆಸ್(ನೆಸಾ ವಾಡಿಯಾ) ನಾನು ಬಹಳ ಸಲ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಕೂಡ ಆಗಿರುವುದರಿಂದ ಈ ವದಂತಿಗಳು ಹುಟ್ಟಿಕೊಂಡಿವೆ. ಹಾಗಾಗಿ ಜನರು ನಾವು ದಂಪತಿಗಳು ಎಂದು ಭಾವಿಸಿದ್ದರು."

''ನಾವು ಇಬ್ಬರು ಒಳ್ಳೆಯ ಸ್ನೇಹಿತರು. ಅಲ್ಲದೆ, ವಾಸ್ತವವಾಗಿ, ನಾನು ಕ್ಯಾಥೆಡ್ರಲ್ ಶಾಲೆಗೆ ಸೇರಲು ನೆಸ್‌ನ ತಂದೆ ಕಾರಣ. ನಮ್ಮ ಕುಟುಂಬಗಳು ಕ್ರಿಸ್‌ಮಸ್ ರಜಾದಿನಗಳಲ್ಲಿ ಒಟ್ಟಿಗೆ ಹೋಗುತ್ತಿದ್ದವು. ನಮ್ಮ ಬಾಲ್ಯದ ಫೋಟೋಗಳು ಸಹ ಇವೆ. ನಾವು ಡೇಟಿಂಗ್​ನಲ್ಲಿದ್ದೇವು ಎಂಬುದು ಶುದ್ಧ ಸುಳ್ಳು ಅದರಲ್ಲಿ ಯಾವುದೇ ಸತ್ಯವಿಲ್ಲ'' ಎಂದು ಅಮೀಷಾ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ.

ರಣಬೀರ್​​ ಬಗ್ಗೆ ಹೇಳಿದ್ದೇನು..?

ರಣವೀರ್​ ನಾನು ಹೈಪ್ರೋಪೈಲ್​ ಬಹಿರಂಗ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದೇವೆ. ಹೀಗಾಗಿ ಜನರು ನಮ್ಮ ಬಗ್ಗೆ ವದಂತಿಗಳನ್ನು ಹಬ್ಬಿಸಿದ್ದಾರೆ. "ನಾವು ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡ ಸಮಯವಿತ್ತು." ನಾವು ಸುಮಾರು ಒಂದು ವರ್ಷದಿಂದ ಒಟ್ಟಿಗೆ ಪಾರ್ಟಿ ಮಾಡುತ್ತಿದ್ದೇವು. ಕೆಲವೊಮ್ಮೆ ನಾನು ರಣಬೀರ್ ಕಪೂರ್ ಅವರ ಮನೆಯಲ್ಲಿ ಮತ್ತು ಕೆಲವೊಮ್ಮೆ ಆರ್.ಕೆ. ಸ್ಟುಡಿಯೋದಲ್ಲಿ ಕೆಲಸ ಮಾಡಿದ್ದೇನೆ. ಹಾಗಾಗಿ ನಮ್ಮ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳುತ್ತಿದ್ದವು.

ಆಗ ನಾನು ಪ್ರಸಿದ್ಧ ನಟಿಯೂ ಆಗಿದ್ದೆ. 'ರೇಸ್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಾವು ಸೈಫ್ ಅಲಿ ಖಾನ್ ಜೊತೆ ಪಾರ್ಟಿ ಮಾಡಿದ್ದೆವು. ನಮ್ಮ ಕುಟುಂಬಗಳು ಕೂಡ ತುಂಬಾ ಹಳೆಯ ಸ್ನೇಹಿತರು. ಆದರೆ ರಣಬೀರ್ ಮತ್ತು ನನ್ನ ನಡುವೆ ಅಂತಹದ್ದೇನೂ ಇರಲಿಲ್ಲ ಎಂದು ಅಮೀಷ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net