

ಬೆಂಗಳೂರು: ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರಿಗೆ (AVES) ಮತದಾನಕ್ಕಾಗಿ ಪೋಸ್ಟಲ್ ವೋಟಿಂಗ್ ಸೆಂಟರ್ (PVC)ನ್ನು ನಿಗದಿ ಪಡಿಸಲಾಗಿದ್ದು ದಿನಾಂಕವನ್ನು ಘೋಷಿಸಲಾಗಿದೆ. ಈ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿ ಸಂಜಯ್ ಬಿ.ಎಸ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ದಿನಾಂಕ:22.04.2023ರಂದು ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ನಡೆದ ವಿಡಿಯೋ ಕಾನ್ಸರನ್ಸ್‌ನಲ್ಲಿ ಅಗತ್ಯ ಸೇವೆಯಡಿ ಬರುವ ಬರುವ ಗೈರು ಹಾಜರಿ ಮತದಾರರಿಗೆ (AVES) ಪೋಸ್ಟೈಲ್ ವೋಟಿಂಗ್ ಸೆಂಟರ್ (PVC)ಅನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕ ಮಾದರಿಯಲ್ಲಿ ನಡೆಸುವಂತೆ ನಿರ್ಧರಿಸಲಾಗಿತ್ತು. ದಿನಾಂಕ 02/05/2023 ರಿಂದ 04/05/2023ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪೋಸ್ಟಲ್ ವೋಟಿಂಗ್ ಸೆಂಟರ್ ಅಥವಅ PVSಅನ್ನು ತೆರೆಯಲಾಗುತ್ತದೆ.