ವ್ಯಷ್ಟಿಯ ಕ್ರೋಧಾಗ್ನಿ ಶಮನಕ್ಕೆ ಕ್ಷಮಾ ಧರ್ಮ

10 DWD 2
????????????????????????????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಹಿಂಸೆಯನ್ನು ಲೆಕ್ಕಿಸದೆ ಸ್ವಾರ್ಥದ ಬೇಡಿಕೆಗಳ ಈಡೇರಿಕೆಯಲ್ಲಿ ಹುಟ್ಟಿಕೊಳ್ಳುವ ವೈರುಧ್ಯಗಳ ಸಂಕೀರ್ಣತೆ, ಸೇಡು, ಹಿಂಸಾಚಾರ, ಸಂಘರ್ಷದ ಅಪರಾಽ ಕೃತ್ಯಗಳ ವ್ಯಷ್ಟಿಯ ಕ್ರೋಧಾಗ್ನಿಯ ಶಮನಕ್ಕೆ ಉತ್ತಮ ಕ್ಷಮಾ ಧರ್ಮ ಬೆಳಕು ಚೆಲ್ಲುತ್ತದೆ ಎಂದು ಲೇಖಕ ಗುರುಮೂರ್ತಿ ಯರಗಂಬಳಿಮಠ ಹೇಳಿದರು.
ತಾಲೂಕಿನ ಅಮ್ಮಿನಬಾವಿ ಗ್ರಾಮದ ಜಿನಮಂದಿರದ ಆವರಣದಲ್ಲಿ ಶ್ರೀ ನೇಮಿನಾಥ ದಿಗಂಬರ ಜೈನ್ ಟ್ರಸ್ಟ್ ಹಾಗೂ ತ್ರಿಶಲಾಮಾತಾ ಮಹಿಳಾ ಮಂಡಳದ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿರುವ 10 ದಿನಗಳ ದಶಲಕ್ಷಣ ಮಹಾಪರ್ವವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಶಾಂತಿ ಮತ್ತು ಆಧ್ಯಾತ್ಮಿಕ ತಲ್ಲಣಗಳಿಗೆ ಕಾರಣವಾಗುವ ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ನಿವಾರಿಸುವ, ಪಶ್ಚಾತ್ತಾಪದ ಅಭಿವ್ಯಕ್ತಿಗೆ ಕಾರಣವಾಗುವ ಉತ್ತಮ ಕ್ಷಮಾ ಧರ್ಮದ ಸರ್ಮೋಚ್ಚ ಕ್ಷಮೆಯು ಆಧ್ಯಾತ್ಮಿಕ ಔನ್ನತ್ಯ ಸಾಧನೆಯ ಜೊತೆಗೆ ಶ್ರಾವಕ- ಶ್ರಾವಕಿಯರ ಜೀವನ ವಿಧಾನವು ಸುಖ, ಶಾಂತಿ, ಸಾಮರಸ್ಯ, ಸಂತೃಪ್ತಿ, ಸಮೃದ್ಧಿಯಿಂದ ನಳನಳಿಸುವಂತೆ ಮಾಡುತ್ತದೆ ಎಂದರು.
ಅಮ್ಮಿನಬಾವಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಎಸ್. ಪತ್ರಾವಳಿ ಅಧ್ಯಕ್ಷತೆ ವಹಿಸಿದ್ದರು. ತ್ರಿಶಲಾಮಾತಾ ಮಹಿಳಾ ಮಂಡಳದ ಅಧ್ಯಕ್ಷೆ ಶಶಿಕಲಾ ದೇಸಾಯಿ, ಶ್ರೀ ನೇಮಿನಾಥ ದಿಗಂಬರ ಜೈನ ಟ್ರಸ್ಟ್ ಅಧ್ಯಕ್ಷ ಟಿ.ಎಂ. ದೇಸಾಯಿ, ಪಾರ್ಶ್ವನಾಥ ದೇಸಾಯಿ, ಬಾಹುಬಲಿ ದೇಸಾಯಿ ಹಾಗೂ ಮಹಾವೀರ ಬಳಿಗೇರ ಅತಿಥಿಗಳಾಗಿದ್ದರು.
ಪಮ್ಮಣ್ಣ ಧಾರವಾಡ, ಶ್ರೇಯಾಂಶ್ ದೇಸಾಯಿ, ಚಂದ್ರಕಾ0ತ ನವಲೂರ, ದೀಪಕ ದೇಸಾಯಿ, ಈಶ್ವರ ಗಡೇಕಾರ, ಬ್ರಹ್ಮಕುಮಾರ ದೇಸಾಯಿ, ಪದ್ಮರಾಜ ಪತ್ರಾವಳಿ, ಸಮ್ಮೇದ ಲೋಕೂರ, ಮಂಜುನಾಥ ಬೊಬ್ಬಕ್ಕನವರ, ಲಕ್ಷ್ಮೀಸೇನ ನವಲೂರ, ಇತರರಿದ್ದರು.
ಶಂಕರ ರಾಘೂನವರ ಸ್ವಾಗತಿಸಿದರು. ತವನಪ್ಪ ಲೋಕೂರ ನಿರೂಪಿಸಿದರು. ಸಾವಿತ್ರಿ ದೇಸಾಯಿ ಜಿನಭಕ್ತಿಗೀತೆ ಪ್ರಸ್ತುತಪಡಿಸಿದರು. ಮಹಾವೀರ ಅಣ್ಣಿಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net