‘ನೆಮ್ಮದಿಯಾಗಿ ಊಟ ಮಾಡಿ’ ಮೈಸೂರಿನಲ್ಲಿ ಫುಡ್ ಸ್ಟಾಲ್​​ ಹಾಕಿದ ದರ್ಶನ್​​ ಅಳಿಯ...food stall

food stall
Published on

ಮೈಸೂರು: ನಟ ದರ್ಶನ್‌ ಅವರ ಅಕ್ಕನ ಮಗ ಚಂದನ್‌ ಕುಮಾರ್ ‘ನೆಮ್ಮದಿಯಾಗಿ ಊಟ ಮಾಡಿ’ ಎನ್ನುವ ಹೆಸರಿನಲ್ಲಿ ಮೈಸೂರಿನಲ್ಲಿ ದಸರಾ ಪ್ರಯುಕ್ತ ಫುಡ್​​ ಸ್ಟಾಲ್ ( food stall )​​ ತೆರೆದಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.‌

ಮೈಸೂರಿನ ದಸರಾ ಅಂಗವಾಗಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಚಂದು ಈ ಸ್ಟಾಲ್ ಹಾಕಿದ್ದಾರೆ. ಇದು ಪಕ್ಕಾ ನಾನ್​ವೆಜ್ ಹೋಟೆಲ್. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸ್ವತಃ ಚಂದು ಅವರೇ ಫುಡ್​ ಸ್ಟಾಲ್​ನಲ್ಲಿ ನಿಂತಿರುವುದನ್ನು ನಾವು ನೋಡ ಬಹುದಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಜೈಲುವಾಸದಲ್ಲಿದ್ದಾರೆ. ದರ್ಶನ್‌ ಅವರ ಇದ್ರೆ ನೆಮ್ದಿಯಾಗಿ ಇರ್ಬೇಕ್‌ ಅನ್ನೋ ದರ್ಶನ್‌ ಅವರ ಡೈಲಾಗ್‌ ಸಿಕ್ಕಾಪಟ್ಟೆ ಫೇಮಸ್‌ ಆಗಿತ್ತು.

ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾದಲ್ಲೂ ಇದ್ರೆ ನೆಮ್ದಿಯಾಗ್‌ ಇರ್ಬೇಕ್‌ ಅನ್ನೋ ಸಾಂಗ್‌ ಕೂಡ ಕಂಪೋಸ್‌ ಆಗಿತ್ತು. ಇದೀಗ ದರ್ಶನ್‌ ಅವರ ಅಕ್ಕನ ಮಗ ಚಂದನ್‌ ಕುಮಾರ್ ಇದೇ ಹೆಸರಿನಲ್ಲಿ ನಾನ್‌ವೆಜ್‌ ಹೋಟೆಲ್‌ ತೆರೆದಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ.‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net