

ಹುಬ್ಬಳ್ಳಿ: ಬೆಂಗಳೂರಿನಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ದರ್ಶನ್ ತೂಗುದೀಪ, ಪವಿತ್ರಾಗೌಡ ಸೇರಿ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಟ ದರ್ಶನ್ ಎಸಗಿರುವ ಕೌರ್ಯಕ್ಕೆ ಶಿಕ್ಷೆ ಆಗಬೇಕು ಎಂಬ ಕೂಗಿನ ಜತೆಗೆ ಸಿನಿಮಾದಿಂದ ಆತನನ್ನು ಬ್ಯಾನ್ ಮಾಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
ಜೈಲುವಾಸದಲ್ಲಿರುವ ದರ್ಶನ್ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ ನಡೆಯುತ್ತಿದೆ ಎಂಬುದನ್ನು ಸಚಿವ ಎಂ.ಬಿ.ಪಾಟೀಲ್ ತಿರಸ್ಕರಿಸಿದರು. ಆ ರೀತಿ ಏನು ಇಲ್ಲ, ಅವರು ಆರೋಪಿಯಾಗಿದ್ದಾರೆ. ಆರೋಪದಿಂದ ಮುಕ್ತರಾಗದಿದ್ದರೆ ಅಥವಾ ಆರೋಪ ಸಾಬೀತಾದರೆ ಅವರಿಗೆ ಖಂಡಿತ ಶಿಕ್ಷೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇನ್ನೂ ಬಿಜೆಪಿ ಆಡಳಿತಾವಧಿಯಲ್ಲಿ ಅಂದ್ರೆ ಫೆಬ್ರವರಿ 2021ರಿಂದ ದರ್ಶನ್ ಕೃಷಿ ಇಲಾಖೆಯ ರಾಯಭಾರಿಯಾಗಿದ್ದರು. ರೈತರ ಹಿತಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಮತ್ತು ಕೃಷಿಕರಲ್ಲಿ ತುಂಬುವ ಸಲುವಾಗಿ ಕೃಷಿ ಇಲಾಖೆ ರಾಯಭಾರಿಯನ್ನು ನೇಮಿಸಿತ್ತು. ಆದರೆ ಪ್ರಸ್ತುತ ಆರೋಪಗಳನ್ನು ಒತ್ತಿರುವ ದರ್ಶನ್ ಅವರನ್ನು ಕೃಷಿ ಇಲಾಖೆ ರಾಯಭಾರಿಯಾಗಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.