ಮೇರುನಟ ಹೇಗಿರಬೇಕು ಎಂಬುದನ್ನು ಡಾ.ರಾಜ್​ ಅವರನ್ನು ನೋಡಿ ಕಲಿಯಲಿ; ದರ್ಶನ್​ ಇನ್ನಾದ್ರೂ ತಪ್ಪು ಒಪ್ಪಿಕೊಳ್ಳಲಿ: ಇಂದ್ರಜಿತ್

darshna
Published on

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ಚಾಲೆಂಜ್​ ಆಗಿ ಪರಿಣಮಿಸಿರುವ ಪ್ರಕರಣ ಇದೀಗ ಮತ್ತಷ್ಟು ಕುತೂಹಲ ಕೆರಳಿಸಿದ್ದು, ಈ ಸಂಬಂಧ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್​ ಸುದ್ದಿಗೋಷ್ಠಿ ಕರೆದಿದ್ದಾರೆ. ಮಾತ್ರವಲ್ಲ, ದರ್ಶನ್​ ಇನ್ನಾದರೂ ತಪ್ಪು ಒಪ್ಪಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

ಈ ವಿಷಯದಲ್ಲಿ ಯಾವುದೇ ರಾಜಕೀಯ ಇಲ್ಲ, ಇದು ವೈಯಕ್ತಿಕ ಹೋರಾಟ, ಒಂಟಿ ಸಲಗ ಹೋರಾಟ ಎಂದಿರುವ ಇಂದ್ರಜಿತ್, ಸಮಾಜದ ಹಿತದೃಷ್ಟಿಯಿಂದ ನಾನು ಮಾತನಾಡುತ್ತಿದ್ದೇನೆ. ನನ್ನ ಮಾತಿಗೆ ನಾನು ಈಗಲೂ ಬದ್ಧವಿದ್ದೇನೆ ಎಂಬುದಾಗಿ ಹೇಳಿದ್ದಾರೆ.

ಘಟನೆ ನಡೆದಿದೆ ಎಂಬುದು ನಿಮಗೆ ಗೊತ್ತಿದೆ. ದರ್ಶನ್​ ತಮ್ಮ ಇಮೇಜ್​ ಇನ್ನೂ ಡಿ-ಫೇಮ್​ ಆಗುವುದಕ್ಕಿಂತ ಮೊದಲೇ ಕ್ಷಮೆ ಕೋರಿ ನ್ಯಾಯ ಒದಗಿಸಲಿ ಎಂಬ ಸಲಹೆಯನ್ನು ಇಂದ್ರಜಿತ್ ನೀಡಿದ್ದಾರೆ. ಮೇರುನಟರು ಹೇಗಿರಬೇಕು ಎಂಬುದು ಡಾ.ರಾಜ್​ಕುಮಾರ್​ ಅವರನ್ನು ನೋಡಿ ಕಲಿಯಲಿ, ದರ್ಶನ್​ ಅವರಂತೆ ವರ್ತಿಸಿ ಮಾದರಿಯಾಗಲಿ ಎಂಬ ಕಿವಿಮಾತು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net