3 ತಿಂಗಳಲ್ಲಿ 15 ಕೆ.ಜಿ ತೂಕ ಕಳೆದುಕೊಂಡ ದರ್ಶನ್

Darshan
Published on

ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡ ಅವರಿಗೆ  ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನುವ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡಲಾಗಿದೆ ಎನ್ನುವ ಆರೋಪದಲ್ಲಿ  ದರ್ಶನ್​  ಹಾಗೂ ಅವರ  ಗ್ಯಾಂಗ್​ ಸೆರೆವಾಸದಲ್ಲಿದ್ದಾರೆ. ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪದ ಮೇಲೆ ಇದೀಗ ನಟ ದರ್ಶನ್​ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದ್ದು, ದರ್ಶನ್​ ಬಾರಿ ತೂಕ ಕಳೆದುಕೊಂಡಿದ್ದರು.

ದರ್ಶನ್ ಜೈಲಿನ ಸೀಮಿತ ಸೌಲಭ್ಯಗಳ ಪರಿಸ್ಥಿತಿಯಲ್ಲಿ, ಐಶಾರಾಮಿ ಬದುಕಿನಿಂದ ದೂರಾಗಿ ಬದುಕು ನಡೆಸುತ್ತಿದ್ದಾರೆ. ಜೈಲು ಸೇರಿದಾಗಿನಿಂದ ಸುಮಾರು 15 ಕೆಜಿ ತೂಕ ಕಳೆದುಕೊಂಡಿದ್ದಾರೆ.

ನಟ ದರ್ಶನ್ ಅನ್ನು ಜೂನ್ 11 ರಂದು ಬಂಧಿಸಲಾಗಿತ್ತು. 14 ದಿನಗಳ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು ಆಗಿನಿಂದಲೂ ಜೈಲಿನಲ್ಲೇ ಕಾಲ ಕಳೆಯುತ್ತಿದ್ದಾರೆ ದರ್ಶನ್. ಜೈಲಿನ ಊಟ, ಏಕಾಂಗಿತನದಿಂದ ದರ್ಶನ್ ದೇಹತೂಕ ಕಳೆದುಕೊಂಡಿದ್ದಾರೆ.

ಜೈಲಿಗೆ ಹೋಗುವ ಮುಂಚೆ ಇದ್ದ ತೂಕಕ್ಕಿಂತಲೂ ಸುಮಾರು 15 ಕೆಜಿ ತೂಕವನ್ನು ನಟ ದರ್ಶನ್ ಕಳೆದುಕೊಂಡಿದ್ದಾರೆ. ಜೈಲಿಗೆ ಹೋಗುವಾಗ ದರ್ಶನ್ ಇದ್ದ ತೂಕಕ್ಕೂ ಮೊಮ್ಮೆ ಬಳ್ಳಾರಿ ಜೈಲಿಗೆ ಬಂದಾಗ ಮತ್ತೆ ತೂಕ ಹಾಕಲಾಗಿದ್ದು, ಎರಡರ ನಡುವೆ ಅಂತರ 15 ಕೆಜಿ ಇದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ ಇನ್ನಷ್ಟು ತೂಕ ಕಳೆದುಕೊಳ್ಳುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net