

ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಹಿನ್ನಲೆಯೆಲ್ಲಿ ರೇಣುಕಾಸ್ವಾಮಿ ಕೊಲೆ ಮಾಡಲಾಗಿದೆ ಎನ್ನುವ ಕೇಸ್ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರದ ಜೈಲು ಸೇರಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ನಾವು ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡು ಹುಚ್ಚಾಟ ಪ್ರದರ್ಶನ ಮಾಡ್ತಿದ್ದಾರೆ.
ವಿಚಾರಣಾಧೀನ ಖೈದಿ ಆಗಿರುವ ನಟ ದರ್ಶನ್ಗೆ ಜೈಲಿನಲ್ಲಿ ನೀಡಿರುವ ನಂಬರ್ 6106 ಅನ್ನು ಇನ್ಮುಂದೆ ಇದೇ ನಮ್ಮ ಲಕ್ಕಿ ನಂಬರ್ ಎಂದಿರುವ ಫ್ಯಾನ್ಸ್, ವಾಹನಗಳಿಗೆ ನಂಬರ್ ಪ್ಲೇಟ್ ಮಾಡಿಸಿಕೊಳ್ಳೋದಾಗಿ ಹೇಳಿದ್ರು. ಟ್ಯಾಟೂ, ಗಾಡಿ ನಂಬರ್ ಹಾಗೂ ಮಗುವಿಗೆ ಖೈದಿ ಡ್ರೆಸ್ ಧರಿಸಿ ಹುಚ್ಚಾಟ ತೋರಿದ್ದು, ಈ ಫೋಟೋಗಳು ವೈರಲ್ ಆಗ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಇದೀಗ ಮೇಲೆ ಖೈದಿ ನಂ 6106 ಎಂದು ಬರೆದುಕೊಂಡು ನಡು ರಸ್ತೆಯಲ್ಲಿ ವೀಲ್ಹಿಂಗ್ ಮಾಡಿ ಕೆಲವರು ಹುಚ್ಚಾಟಕ್ಕಿಳಿದಿದ್ದಾರೆ.
ಆಟೋ ಮೇಲೆ ದರ್ಶನ್ಗೆ ನೀಡಿರುವ ವಿಚಾರಣಾಧೀನ ಖೈದಿ ನಂಬರ್ ಹಾಕಿಕೊಂಡು ವಾಹನ ದಟ್ಟನೆಯಿರುವ ರಸ್ತೆಯಲ್ಲಿ ಡೇಜರರ್ಸ್ ವೀಲ್ಹಿಂಗ್ ಮಾಡಿದ ವಿಡಿಯೋ ಇದೀಗ ವೈರಲ್ ಆಗ್ತಿದೆ.
ಆಟೋ ಮೇಲೆ ಖೈದಿ ನಂಬರ್ ಹಾಕ್ಕೊಂಡು ಹುಚ್ಚಾಟ ಮೆರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಲ್ಹಿಂಗ್ ವಿಡಿಯೋ ಪೋಸ್ಟ್ ಮಾಡಿ ಪೋಸ್ ಕೊಟ್ಟಿದ್ದಾರೆ. Jaga boss ಇನ್ಸ್ಟಾಗ್ರಾಮ್ ಐಡಿಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇವರ ಹುಚ್ಚಾಟಕ್ಕೆ ಬೇರೆಯವರ ಪ್ರಾಣಕ್ಕೆ ತೊಂದ್ರೆಯಾದ್ರೆ ಯಾರು ಹೊಣೆ? ಎಂದು ನೆಟ್ಟಿಗರು ಪೊಲೀಸರನ್ನು ಪ್ರಶ್ನೆ ಮಾಡ್ತಿದ್ದಾರೆ.
ನಟ ದರ್ಶನ್ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದಾರೆ. ಇತ್ತ ಅಭಿಮಾನಿಗಳು ಹಲವು ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಾನಾ ರೀತಿಯಲ್ಲಿ ಅಭಿಮಾನ ತೋರಿಸುವ ದರ್ಶನ್ ಅಭಿಮಾನಿಗಳು ಈ ಬಾರಿ ಮಿತಿ ದಾಟಿದ್ದಾರೆ.