

ಮೈಸೂರು: ( Darshan celebrated Sankranti )ಮೈಸೂರಿನ ಫಾರಂಹೌಸ್ನಲ್ಲಿ ಪತ್ನಿ ವಿಜಯಲಕ್ಷ್ಮಿ ಜತೆ ದರ್ಶನ್ ಸಂಕ್ರಾಂತಿ ಆಚರಣೆ ಮಾಡುತ್ತಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಫಾರಂ ಹೌಸ್ನಲ್ಲಿ ಒಟ್ಟಿಗೆ ಪ್ರಾಣಿಗಳ ಆರೈಕೆ ಮಾಡುತ್ತಿರುವ ಚಿತ್ರ ಇದೀಗ ವೈರಲ್ ಆಗಿದೆ.
ದರ್ಶನ್ ಪ್ರತಿವರ್ಷವೂ ಸಂಕ್ರಾಂತಿ ಹಬ್ಬವನ್ನು ತಮ್ಮ ಫಾರಂ ಹೌಸ್ನಲ್ಲಿ ಆಚರಣೆ ಮಾಡುತ್ತಾರೆ. ಫಾರಂ ಹೌಸ್ನಲ್ಲಿರುವ ಎತ್ತುಗಳು, ಹಸು, ಕುದುರೆ ಇನ್ನಿತರೆ ಪ್ರಾಣಿಗಳಿಗೆ ಸ್ನಾನ ಮಾಡಿಸಿ, ಅಲಂಕಾರ ಮಾಡಿಸಿ ಅವುಗಳನ್ನು ಬೆಂಕಿ ಹಾಯಿಸುತ್ತಾರೆ.
ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರುಗಳು ಫಾರಂ ಹೌಸ್ನಲ್ಲಿ ಪ್ರಾಣಿಗಳನ್ನು ಆರೈಕೆ ಮಾಡುತ್ತಿರುವ ಚಿತ್ರ ಇದೀಗ ವೈರಲ್ ಆಗಿದೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಇಬ್ಬರೂ ಸಹ ಚಿತ್ರದಲ್ಲಿ ಮುಖ ತೋರಿಸಿಲ್ಲ.
ವಿಜಯಲಕ್ಷ್ಮಿ ತಮ್ಮ ಮುದ್ದಿನ ನಾಯಿಯನ್ನು ಫಾರಂ ಹೌಸ್ಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಯೇ ಪತಿಯೊಂದಿಗೆ ಹಬ್ಬ ಆಚರಿಸುತ್ತಿದ್ದಾರೆ. ಪುತ್ರ ಸಹ ಫಾರಂ ಹೌಸ್ನಲ್ಲಿಯೇ ಇದ್ದಾರೆ ಎನ್ನಲಾಗುತ್ತಿದೆ.