ದಾಸನ ವಿರುದ್ಧ ಸುಳ್ಳು ದಾಖಲೆ ಸೃಷ್ಟಿ..ಎಸಿಪಿ ಚಂದನ್​ ಕುಮಾರ್​ಗೆ ಸಂಕಷ್ಟ.?! ಪ್ರತಿಭಟನೆಗೆ ಕರೆ ನೀಡಿದ ಕನ್ನಡ ಒಕ್ಕೂಟ...!

ದರ್ಶನ್​ ಪ್ರಕರಣ
ದರ್ಶನ್​ ಪ್ರಕರಣ
Published on
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಜೈಲುಪಾಲಾಗಿರೋ ದರ್ಶನ್‌ ಪವಿತ್ರಾಗೌಡ ಸೇರಿ ಒಟ್ಟು 17 ಮಂದಿ ಆರೋಪಿಗಳಾದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾದ ಬಳಿಕ ಈ ಕೇಸ್‌ನಲ್ಲಿದ್ದ ಎಲ್ಲಾ ಆರೋಪಿಗಳು ಮತ್ತೆ ಜೈಲುಪಾಲಾದರು.ರೇಣುಕಾಸ್ವಾಮಿ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಮತ್ತೆ ಈ ಕೇಸ್‌ ಮುನ್ನಲೆಗೆ ಬಂದಿದೆ. ಈ ಕೇಸ್‌ನ ತನಿಖಾಧಿಕಾರಿ ವಿರುದ್ಧ ಪ್ರಕರಣದ ಆರೋಪಿ ಪರ ವಕೀಲರು ಕೋರ್ಟ್‌ ಮೊರೆ ಹೋಗಿದ್ದಾರೆ. ಮಹಜರು ಸಂದರ್ಭದಲ್ಲಿ ತೆಗೆದ ಚಿತ್ರಣ ಬದಲಾಗಿದೆ. ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಿದ ರೀತಿಯಲ್ಲಿಲ್ಲ ಹಾಗಾಗಿ ತನಿಖಾಧಿಕಾರಿ ಮೇಲೆ ಪ್ರಕರಣ ದಾಖಲಾಗಬೇಕು ಎಂದು ಕೋರ್ಟ್‌ ಮೊರೆ ಹೊಗಿದ್ದಾರೆ.
ದರ್ಶನ್​ ಈ ಪ್ರಕರಣದಲ್ಲಿ ಸಿಲುಕಿದ ದಿನದಿಂದಲೂ ಯಾರು ತಪ್ಪು ಯಾರು ಸರಿ ಅನ್ನೋ ಚರ್ಚೆ ನಡೆಯುತ್ತಲೇ ಇರೋದು ಹೊಸದೇನಲ್ಲ. ತನಿಖೆ ಸರಿಯಾಗಿ ಆಗಿಲ್ಲ ಏನೋ ಷಡ್ಯಂತರ ನಡೆದಿದೆ ಎಂಬ ಅಭಿಪ್ರಾಯವೂ ಅನೇಕರದ್ದಾಗಿತ್ತು. ಮತ್ತೊಂದೆಡೆ ಪೋಲೀಸರ ತನಿಖೆಯ ಮೇಲೆಯೇ ಹಲವರು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ.
ಮಾರ್ಚ್​​ 11 ರಂದು ಪ್ರತಿಭಟನೆ..!
ಇದರ ನಡುವೆ ಇದೀಗ ಎಸಿಪಿ ಚಂದನ್​ ಮತ್ತು ಇನ್ಸ್​​​ಪೆಕ್ಟರ್​​ ಗಿರೀಶ್​ ನಾಯಕ್​ ದರ್ಶನ್​ ವಿರುದ್ಧ ತನಿಖೆಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆಂಬ ಗಂಭೀರ ಆರೋಪಗಳನ್ನ ಕರ್ನಾಟಕ ಸಮಘಟನೆಗಲ ಕನ್ನಡ ಒಕ್ಕೂಟ ಮಾಡಿದೆ. ಅಷ್ಟೇ ಅಲ್ಲದೇ ಮಾರ್ಚ್​​ 11 ರಂದು ಪ್ರತಿಭಟನೆ ಕೂಡ ಮಾಡಲು ಮುಂದಾಗಿದೆ. ಇನ್ನು ಈ ಕುರಿತಂತೆ ಮಾಹಿತಿ ನೀಡಿರುವ ಕರ್ನಾಟಕ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ನಟರಾಜ್​ ಬೊಮ್ಮಸಂದ್ರ, ನ್ಯಾಯ ಸಮ್ಮತವಾಗಿ ತನಿಖೆ ನಡೆಯಬೇಕೇ ಹೊರತು ಸುಳ್ಳು ದಾಖಲೆಗಳ ಮೂಲಕ ಯಾರನ್ನೂ ಸಿಲುಕಿಸಬಾರದು ಎಂದು ಕಿಡಿ ಕಾರಿದ್ದಾರೆ. ಆರೋಪಿತ ಪೋಲೀಸರು ಇಬ್ಬರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಅನ್ನೋದು ಸಂಘಟನೆಯ ಮುಖ್ಯ ಬೇಡಿಕೆಯಾಗಿದೆ.
ಜೈಲಿನಲ್ಲಿ ಟಿವಿ ಸಿಕ್ಕಿದ್ದಕ್ಕೆ ದರ್ಶನ್‌ ಧನ್ಯವಾದ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ತಲೆದಿಂಬು ಮತ್ತು ಟಿವಿಗಾಗಿ ಬೇಡಿಕೆ ಇಟ್ಟಿದ್ದರು. ಈಗ ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್ ಬದಲಿಗೆ ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಲು ಅನುಮತಿ ಕೋರಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ ನಡೆದ ವಿಚಾರಣೆಯ ಆರಂಭದಲ್ಲಿ ದರ್ಶನ್ ಅವರು ನ್ಯಾಯಾಧೀಶರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದರು. ಜೈಲಿನಲ್ಲಿ ಟಿವಿ ವ್ಯವಸ್ಥೆ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ದರ್ಶನ್ ಹೇಳಿದರು.
ವಿಚಾರಣೆಯ ವೇಳೆ ದರ್ಶನ್ ಪರ ವಕೀಲರು ಹಾಗೂ ಸ್ವತಃ ದರ್ಶನ್ ಅವರು ಕೆಲವು ಪ್ರಮುಖ ಬೇಡಿಕೆಗಳನ್ನು ನ್ಯಾಯಾಲಯದ ಮುಂದಿಟ್ಟರು. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವ ಬದಲು ಕನಿಷ್ಠ ಒಂದು ದಿನವಾದರೂ ನ್ಯಾಯಾಲಯಕ್ಕೆ ನೇರವಾಗಿ ಹಾಜರಾಗಲು ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದರು.
ಜೈಲಿನಲ್ಲಿ ಅಗತ್ಯ ಸೌಲಭ್ಯಗಳನ್ನು ಪಡೆದುಕೊಂಡಿರುವ ದರ್ಶನ್, ಈಗ ಕಾನೂನು ಹೋರಾಟವನ್ನು ಚುರುಕುಗೊಳಿಸಲು ಮತ್ತು ಕುಟುಂಬದವರನ್ನು ಹತ್ತಿರದಿಂದ ಭೇಟಿ ಮಾಡುವ ಬೇಡಿಕೆ ಇಟ್ಟಿದ್ದಾರೆ. ಮಾರ್ಚ್ 2ರ ವಿಚಾರಣೆಯಲ್ಲಿ ನ್ಯಾಯಾಲಯವು ದರ್ಶನ್ ಅವರ ಈ ಮನವಿಗಳಿಗೆ ಯಾವ ರೀತಿ ಸ್ಪಂದಿಸಲಿದೆ ಎಂಬುದು ಕಾದುನೋಡಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net