ಜಾಮೀನು ಪಡೆದು ಆರಾಮಾಗಿದ್ದ 'ದಾಸ'ನಿಗೆ 'ಸುಪ್ರೀಂ' ಟೆನ್ಶನ್​! ರದ್ದಾಗಲಿದೆಯೇ ಜಾಮೀನು? | Supreme Court

darshan
Published on

ಬೆಂಗಳೂರು: ರೇಣುಕಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದರ್ಶನ ಸೇರಿದಂತೆ ಏಳು ಮಂದಿಗೆ ಇದೀಗ ಚಿಂತೆ ಶುರುವಾಗಿದೆ. ಇಂದು (ಜ.24) ದರ್ಶನ್​ಗೆ ಹೈಕೋರ್ಟ್​ ನೀಡಿರುವ ಜಾಮೀನು ರದ್ದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ (Supreme Court)  ನಡೆಯಲಿದೆ.

ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿ ದರ್ಶನ್​ ಸೇರಿದಂತೆ ಒಟ್ಟು ಏಳು ಮಂದಿಗೆ ಈಗ 'ಸುಪ್ರೀಂ' ಟೆನ್ಶನ್​ ಕಾಡಲಾರಂಭಿಸಿದೆ. ಈ ಹಿಂದೆ ಹೈಕೋರ್ಟ್​ನಲ್ಲಿ ದರ್ಶನ್​ ವಿರುದ್ಧ ಎಸ್​ಪಿಪಿ ಪ್ರಸನ್ನ ಕುಮಾರ್​ ಪ್ರಬಲ ವಾದ ಮಂಡಿಸಿದ್ದರು. ಆದರೆ, ಅಂತಿಮವಾಗಿ ಕೋರ್ಟ್​ ದರ್ಶನ್​ಗೆ ಜಾಮೀನು ಮಂಜೂರು ಮಾಡಿತು. ಆದರೆ, ಇದನ್ನು ಒಪ್ಪದ ಬೆಂಗಳೂರು ಪೊಲೀಸರು, ಹೈಕೋರ್ಟ್​ ನೀಡಿದ ಜಾಮೀನು ಪ್ರಶ್ನಿಸಿ ಇದೀಗ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ.

ರಾಜ್ಯ ಸರ್ಕಾರದಿಂದ ಅನುಮತಿ ಸಿಕ್ಕ ಬೆನ್ನಲ್ಲೇ ರೇಣುಕಸ್ವಾಮಿ ಹತ್ಯೆಯಲ್ಲಿ ನೇರವಾಗಿ ಭಾಗಿಯಾದ ದರ್ಶನ್ ಮತ್ತು ಏಳು ಆರೋಪಿಗಳ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಇದರ ವಿಚಾರಣೆ ಇಂದು ನಡೆಯಲಿದ್ದು, ಆರೋಪಿಗಳಿಗೆ ನೀಡಲಾದ ಜಾಮೀನು ರದ್ದಾಗಲಿದೆಯೇ ಎಂಬುದನ್ನು ವಿಚಾರಣೆ ನಂತರ ತಿಳಿಯಬೇಕಿದೆ.

ಸದ್ಯ ಎಲ್ಲಾ ಮುಗೀತು, ವಿಶ್ರಾಂತಿಸಲು ಇದು ಸೂಕ್ತ ಸಮಯ ಎಂದುಕೊಂಡಿದ್ದ ದರ್ಶನ್​ಗೆ ಈಗ ಸುಪ್ರೀಂಕೋರ್ಟ್​ನಲ್ಲಿ ಜಾಮೀನು ರದ್ದು ಕೋರಿ ನಡೆಯುವ ಅರ್ಜಿ ವಿಚಾರಣೆ ಸದ್ಯ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಏನಾಗಲಿದೆ? ಜಾಮೀನು ರದ್ದಾಗಲಿದ್ಯಾ? ಎಂಬ ಟೆನ್ಶನ್ ಸದ್ಯ​ ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net