ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಮೇಲೆ ದಾಳಿ

denmark
Published on

ಕೋಪನ್​ಹ್ಯಾಗನ್: ಡೆನ್ಮಾರ್ಕ್ ನ ಪ್ರಧಾನಿ ಮೆಟ್ಟೆ ಫ್ರೆಡ್ರಿಕ್ಸೆನ್ ಅವರ ಮೇಲೆ ದಾಳಿ ನಡೆದಿದೆ. ರಾಜಧಾನಿ ಕೋಪನ್ ಹ್ಯಾಗನ್ ನಲ್ಲಿ ದುಷ್ಕರ್ಮಿಯೊಬ್ಬ ಈ ಕೃತ್ಯ ಎಸಗಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

"ಕೋಪನ್ ಹ್ಯಾಗನ್ ನ ಕಲೋರ್ವೆಟ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಪ್ರಧಾನಿ ಮೇಲೆ ದಾಳಿ ನಡೆಸಿದ್ದಾನೆ. ಭದ್ರತಾ ಸಿಬ್ಬಂದಿ ತಕ್ಷಣ ದಾಳಿಕೋರನನ್ನು ಹಿಡಿದಿದ್ದಾರೆ. ಈ ಕುರಿತು ಫ್ರೆಡ್ರಿಕ್ಸನ್ ಅವರ ಕಚೇರಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

"ಪ್ರಧಾನಿ ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ. ಭದ್ರತಾ ಸಿಬ್ಬಂದಿ ಅವರನ್ನು ಅಲ್ಲಿಂದ ಕರೆದೊಯ್ದರು ಎಂದು ತಿಳಿಸಲಾಗಿದೆ.

ಆದರೆ, ಆಕೆಯ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲವು ವಾರಗಳ ಹಿಂದೆ ಐರೋಪ್ಯ ಒಕ್ಕೂಟದ ಚುನಾವಣೆ ನಡೆಯುತ್ತಿದ್ದ ಸಮಯದಲ್ಲಿ, ಸ್ಲೋವಾಕಿಯಾ ಸಚಿವ ರಾಬರ್ಟ್ ಫಿಕೋ ಮೇಲೆ ದಾಳಿಕೋರರು ಗುಂಡು ಹಾರಿಸಿದ್ದರು. ಅವರು ಆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net