ನೆಲ್ಲಿಕಾರು, ಮಾಂಟ್ರಾಡಿಯಲ್ಲಿ ಮನೆಗಳಿಗೆ ಹಾನಿ

ಗಾಳಿಮಳೆಗೆ ಮಾಂಟ್ರಾಡಿ ಗ್ರಾಮದ ಕೊಟ್ಟಿಬೆಟ್ಟು ನಿವಾಸಿ ವಿಜಯ ಎಂಬುವವರ ಮನೆಯ ಮೇಲ್ಛಾವಣಿಯ ಶೀಟ್ ಗಾಳಿಗೆ ಹಾರಿಹೋಗಿದೆ.
ಗಾಳಿಮಳೆಗೆ ಮಾಂಟ್ರಾಡಿ ಗ್ರಾಮದ ಕೊಟ್ಟಿಬೆಟ್ಟು ನಿವಾಸಿ ವಿಜಯ ಎಂಬುವವರ ಮನೆಯ ಮೇಲ್ಛಾವಣಿಯ ಶೀಟ್ ಗಾಳಿಗೆ ಹಾರಿಹೋಗಿದೆ.
Published on

ಪ್ರಮುಖ ಮುಖ್ಯಾಂಶಗಳು

  • ಮನೆ ಹಾಗೂ ಶೌಚಗೃಹ ಜಖಂ
  • ಮರ ಬಿದ್ದು ಸಂಚಾರಕ್ಕೆ ಅಡಚಣೆ
ಮೂಡುಬಿದಿರೆ: ನೆಲ್ಲಿಕಾರು ಮತ್ತು ಮಾಂಟ್ರಾಡಿ ಗ್ರಾಮಗಳಲ್ಲಿ ಗುರುವಾರ ಬೀಸಿದ ಭಾರಿ ಗಾಳಿ, ಮಳೆಗೆ ಎರಡು ಮನೆಗಳು ಜಖಂಗೊಂಡಿದ್ದು, 8ಕ್ಕೂ ಅಧಿಕ ಮರಗಳು ಧರೆಗುರುಳಿವೆ.
ನೆಲ್ಲಿಕಾರು ಗ್ರಾಪಂ ವ್ಯಾಪ್ತಿಯ ಮಾಂಟ್ರಾಡಿ ಗ್ರಾಮದ ಕೊಟ್ಟಿಬೆಟ್ಟು ನಿವಾಸಿ ವಿಜಯ ಎಂಬುವರ ಮನೆಯ ಮೇಲ್ಛಾವಣಿಯ ಶೀಟ್ ಗಾಳಿಗೆ ಹಾರಿಹೋಗಿದ್ದು, ಮನೆಗೆ ಭಾಗಶಃ ಹಾನಿಯಾಗಿದೆ. ನೆಲ್ಲಿಕಾರು ಗ್ರಾಮದ ಅನ್ನು ಕೊರಗ ಅವರ ಮನೆ ಮೇಲೆ ಮರ ಬಿದ್ದ ಪರಿಣಾಮ ಮನೆ ಹಾಗೂ ಶೌಚಗೃಹ ಜಖಂಗೊಂಡಿದೆ. ನೆಲ್ಲಿಕಾರು ನಿವಾಸಿ ನಜೀರ್ ಎಂಬುವರ ಮನೆ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ. ಮಾಂಟ್ರಾಡಿ ನಿವಾಸಿ ಸಂತೋಷ್ ಕೋಟ್ಯಾನ್ ಅವರ ಮನೆಗೂ ಹಾನಿಯಾಗಿದೆ. ಬೋರುಗುಡ್ಡೆ ಬಳಿಯ ಪಿಡಬ್ಲುೃಡಿ ರಸ್ತೆಗೆ ಬೃಹತ್ ಬೋಗಿ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪಂಚಾಯಿತಿ ಕಚೇರಿ ಬಳಿಯ ನೆಡುತೋಪಿನಲ್ಲಿ 7 ಅಕೇಶಿಯಾ ಮರಗಳು ಬುಡಮೇಲಾಗಿ ಬಿದ್ದಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net