ಗಾಳಿ, ಮಳೆಯಿಂದ ಹಾನಿ

sor rain
ಸೊರಬ ಪಟ್ಟಣದ ಶ್ರೀ ರಾಮಚಂದ್ರ ದೇವಸ್ಥಾನದ ಮುಂದಿನ ತಗಡಿನ ಛಾವಣಿ ಕುಸಿದಿರುವುದು.
Published on

ಸೊರಬ: ಎರಡ್ಮೂರು ದಿನಗಳಿಂದ ಗಾಳಿ ಸಹಿತ ಮಳೆಗೆ ಪಟ್ಟಣದ ರಾಮಚಂದ್ರ ದೇವಸ್ಥಾನದ ಮಂದಿನ ತಗಡಿನ ಹಾಗೂ ಹೆಂಚಿನ ಛಾವಣಿ ಕುಸಿದಿದೆ. ಪಟ್ಟಣದ ಮಧ್ಯಭಾಗದಲ್ಲಿರುವ ದೇವಸ್ಥಾನದ ಎದುರು ರಕ್ಷಣೆಗೆ ಹಾಕಿದ್ದ ತಗಡಿನ ಛಾವಣಿ ಬೀರುಗಾಳಿ ಸಹಿತ ಮಳೆಯಿಂದ ಹಾರಿಹೋಗಿದೆ. ಛಾವಣಿಗೆ ಆಧಾರವಾಗಿದ್ದ ಪಕಾಸಿಗಳು ಮುರಿದುಬಿದ್ದಿವೆ. ಪಟ್ಟಣದ ವಿವಿಧೆಡೆ ಮನೆಗಳಿಗೆ ಹಾನಿಯಾಗಿದೆ. ಚಂದ್ರಗುತ್ತಿ 4, ಉಳವಿಯಲ್ಲಿ 5, ಶಿರಾಳಕೊಪ್ಪ ರಸ್ತೆಯಲ್ಲಿ 7 ವಿದ್ಯುತ್ ಕಂಬಗಳು ಮುರಿದುಬಿದ್ದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net