ಸರ್ಕಾರದಿಂದ ದಲಿತ ಅಧಿಕಾರಿಯ ತಲೆದಂಡ

protest
ಹುಬ್ಬಳಿ ಡಿಸಿಪಿ ರಾಜೀವ್ ಅಮಾನತ್ತು ಖಂಡಿಸಿ ಕೋಲಾರದಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.
Published on

ಕೋಲಾರ: ಹುಬ್ಬಳ್ಳಿಯ ಅಂಜಲಿ ಕೊಲೆ ಪ್ರಕರಣದಲ್ಲಿ ಡಿಸಿಪಿ ರಾಜೀವ್ ಅವರನ್ನು ಸರ್ಕಾರ ಅಮಾನತ್ತುಗೊಳಿಸಿರುವುದನ್ನು ಖಂಡಿಸಿ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ನಗರದ ನಚಿಕೇತನ ನಿಲಯದ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ರಾಜ್ಯದಲ್ಲಿ ದಲಿತ ಪ್ರಜ್ಞೆಯು ಸತ್ತು ಹೋಗಿದೆ. ಇದರಿಂದಲೆ ಅಂಜಲಿ ಪ್ರಕರಣದಲ್ಲಿ ಸರ್ಕಾರವು ದಲಿತ ಅಽಕಾರಿಯ ತಲೆ ದಂಡ ಪಡೆದುಕೊಂಡಿದೆ ಎಂದು ಆರೋಪಿಸಿದರು.
ಡಿಸಿಪಿ ರಾಜೀವ್ ಬೇರೆ ಜಾತಿಗೆ ಸೇರಿದ್ದರೆ ರಕ್ಷಣೆ ಮಾಡುತ್ತಿದ್ದರು. ದಲಿತರೆಂದು ಬಲಿಪಶು ಮಾಡಿದ್ದಾರೆ. ಸಚಿವರಾದ ಪರಮೇಶ್ವರ, ಮಹದೇವಪ್ಪ, ಮಲ್ಲಿಖಾರ್ಜುನ ಖರ್ಗೆ ಅವರು ಇದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಽಕಾರದಲ್ಲಿದ್ದು, ದಲಿತರಿಗೆ ನ್ಯಾಯಕೊಡಿಸುವಲ್ಲಿ ವಿ-Àಲವಾಗಿದೆ. ದಲಿತರ ಪ್ರಜ್ಞೆಯ ಸಾವು ಬಹಳ ಅಸಹನೀಯವಾಗಿದೆ. ಇವತ್ತು ನುಡಿಗಳ ಮೂಲಕವೇ ಪುನರುತ್ಥಾನ ಮಾಡಬೇಕು. ನಮ್ಮ ಕುಲಬಳಗವು ಕಾಂಗ್ರೆಸ್‌ನ ಬಲೆಯಲ್ಲಿ ಸಿಕ್ಕಿ ಬಿದ್ದಿದೆ. ಮುಂದೆ ಪ್ರತಿಭಟನೆ ಎಲ್ಲೆಡೆ ನಡೆಯಲಿದೆ ಎಂದರು.
ಮೂರು ದೀಪ ಹಚ್ಚಿದ್ದೇವೆ ಒಂದು ಅಂಜಲಿ ನೆನಪಿಗೆ ಹಾಗೂ ನುಡಿಕಾರ ಲಕ್ಕೂರು ಆನಂದ್‌ಗೆ ನುಡಿ ನಮನ ಸಲ್ಲಿಸಿದ್ದೇವೆ. ದಲಿತ ಪ್ರಜ್ಞೆಯ ಸಾವಾಗಿರುವುದಕ್ಕೆ ಮತ್ತೊಂದು ದೀಪ ಹಚ್ಚಿದ್ದೇವೆ. ಮೊದಲ ಇಬ್ಬರನ್ನು ಉಳಿಸಿಕೊಳ್ಳಲು ಅಸಾಧ್ಯ ಆದರೆ, ಸತ್ತು ಹೋಗಿರುವ ದಲಿತ ಪ್ರಜ್ಞೆಯನ್ನು ಬದುಕಿಸಿಕೊಂಡು ವಾಪಸ್ ತರಬೇಕು, ಆ ಮೂಲಕ ದಲಿತ ನ್ಯಾಯ ಪಡೆದುಕೊಳ್ಳಲು ದೀಪದ ಬೆಳಕು ರಾಜ್ಯಾದ್ಯಂತ ಪಸರಿಸಲಿದೆ ಎಂದು ಹೇಳಿದರು.
ಹೋರಾಟಗಾರ್ತಿ ಕೆ.ವಿ.ನೇತ್ರಾವತಿ ಮಾತನಾಡಿ, ದಲಿತ ಮುಖಂಡರು ೭೦ ಹಾಗೂ ೮೦ರ ದಶಕದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ನಮಗೆ ಅರಿವು ಮುಖ್ಯ. ಅಂಬೇಡ್ಕರ್ ಅವರಿಗಿದ್ದ ಏಕೈಕ ಸಂಪತ್ತು ಜ್ಞಾನ. ಶೋಷÀಣೆಯಿಂದ ಬಿಡುಗಡೆಗೆ ಹಾದಿ ತೋರಿಸಿದರು ಎಂದರು.
ಪ್ರತಿಭಟನೆಯಲ್ಲಿ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ, ಮುಖಂಡರಾದ ಮೇಡಿಹಾಳ ಚಂದ್ರಶೇಖರ್, ಹಾರೋಹಳ್ಳಿ ವೇಣು, ಮೂರ್ತಿ, ವಿ.ಎಂ.ರಮೇಶ್, ಕುರಗಲ್ ಮುರಳಿ, ಅಲೇರಿ ರಘು, ಪ್ರಸಾದ್, ರೇಣು ಮತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net