ಅಥ್ಲೆಟಿಕ್ಸ್‌ನಲ್ಲಿ ದಕ್ಷಿಣ ಕನ್ನಡ ಮೇಲುಗೈ

klr sports
ಕೋಲಾರ ನಗರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರಉವ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ ಹರ್ಡಲ್ಸ್ನಲ್ಲಿ ಗೆಲುವಿಗೆ ಸೆಣಸುತ್ತಿರುವ ವಿವಿಧ ಜಿಲ್ಲೆಯ ಕ್ರೀಡಾಪಟುಗಳು.
Published on

ಕೋಲಾರ: ರಾಜ್ಯಮಟ್ಟದ ಅಥ್ಲೆಟಿಕ್ಸ್ ಹೊನಲು, ಬೆಳಕಿನ ಕ್ರೀಡಾಕೂಟದ ಹಲವು ಮೇಲಾಟಗಳ ವಿಜೇತರಿಗೆ ಡಿಡಿಪಿಐ ಕೃಷ್ಣಮೂರ್ತಿ ಶುಭ ಕೋರಿದರು.

ಜಿಲ್ಲಾಡಳಿತ, ಜಿಪಂ ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಶನಿವಾರ ಬೆಳಗ್ಗೆ ನೋಡಲ್ ಅಽಕಾರಿಗಳ ತುರ್ತು ಸಭೆ ನಡೆಸಿ, ವಿವಿಧ ಸ್ಪರ್ಧೆಗಳ ವಿಜೇತರನ್ನು ಘೋಷಿಸಿದರು.

ಮಕ್ಕಳಿಗೆ ಊಟ, ವಸತಿ, ಸಾರಿಗೆ, ವೈದ್ಯಕೀಯ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿದೆಯೇ ಎಂಬುದನ್ನು ಪ್ರತಿ ಒಂದು ಗಂಟೆಗೊಮ್ಮೆ ಪರಿಶೀಲಿಸಿ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಡಿಡಿಪಿಐ ಸಲಹೆ ನೀಡಿದರು.

ಬಾಲಕಿಯರ ವಿಭಾಗದ ೮೦೦ ಮೀ.ಓಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾಗಿಣಿ ಪ್ರಥಮ, ಆಳ್ವಾಸ್ ಶಾಲೆಯ ಪ್ರಿಯಾಂಕಾ ಮಾರುತಿ ಭಜಂತ್ರಿ ದ್ವಿತೀಯ, ಉತ್ತರ ಕನ್ನಡ ಜಿಲ್ಲೆಯ ಅಕ್ಷರ ಸಂಜಯ್ ತೃತೀಯ ಸ್ಥಾನ ಪಡೆದಿದ್ದಾರೆ.

ಉದ್ದಜಿಗಿತದಲ್ಲಿ ಉತ್ತರ ಕನ್ನಡ ಜಿಲ್ಲೆಯ ಚೇತನ್ ಭಾಸ್ಕರ್ ಪ್ರಥಮ, ಉಡುಪಿ ಜಿಲ್ಲೆಯ ಆವಾನಿ ಗಣೇಶ್ ದ್ವಿತೀಯ, ಮೈಸೂರು ಜಿಲ್ಲೆಯ ಪಿ.ದೀಪಿಕಾ ತೃತೀಯ ಸ್ಥಾನ ಪಡೆದಿದ್ದಾರೆ. ಎತ್ತರ ಜಿಗಿತದಲ್ಲಿ ಶಿವಮೊಗ್ಗ ಜಿಲ್ಲೆಯ ಎಂ.ಆರ್.ಅಶ್ವಿನಿ ಪ್ರಥಮ, ದಕ್ಷಿಣ ಕನ್ನಡದ ರಕ್ಷಿತಾ ದ್ವಿತೀಯ, ಜಿ.ಕೀರ್ತಿ ತೃತೀಯ, ಗುಂಡು ಎಸೆತದಲ್ಲಿ ತನುಶ್ರೀ ಪಿ.ರಾಯ್ ಪ್ರಥಮ, ಸ್ಪೂರ್ತಿ ದ್ವಿತೀಯ, ಪೂರ್ಣಿಮಾ ನಾಗಪ್ಪ ಲಮಾಣಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಚಕ್ರ ಎಸೆತದಲ್ಲಿ ಮೈಸೂರಿನ ವರ್ಷಗೌಡ ಪ್ರಥಮಸ್ಥಾನ ಗಳಿಸಿದ್ದರೆ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಅಶ್ವಿನಿ ಅರುನ್‌ಶೆಟ್ಟಿ, ಚಸ್ಮಿತಾ ವಿ.ಡಿ. ಅವರು ಪಡೆದಿದ್ದಾರೆ.

ಬಾಲಕರ ವಿಭಾಗ ಸಾಧಕರು

ಗುಂಡು ಎಸೆತದಲ್ಲಿ ಚಾಮರಾಜನಗರ ಜಿಲ್ಲೆಯ ಖದೀರ್‌ವೆಲ್ ಪ್ರಥಮ, ದಕ್ಷಿಣ ಕನ್ನಡದ ಧನ್ವೀಶ್ ಚಂದ್ರ ದ್ವಿತೀಯ, ಹಾಸನಜಿಲ್ಲೆಯ ಜಿ.ಸಂತೋಷ್ ತೃತೀಯ ಸ್ಥಾನ ಪಡೆದಿದ್ದಾರೆ. ಉದ್ದ ಜಿಗಿತದಲ್ಲಿ ಚಿತ್ರದುರ್ಗದ ಅಭಿ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಯ ಮನೀಶ್ ಬಿ.ಶೆಟ್ಟಿ ದ್ವಿತೀಯ, ವಿಜಯಪುರ ಜಿಲ್ಲೆಯ ಸೈಯದ್‌ ಸಾಬ್ ತೃತೀಯ ಸ್ಥಾನ ಪಡೆದಿದ್ದಾರೆ. ಎತ್ತರ ಜಿಗಿತದಲ್ಲಿ ಶಿವಮೊಗ್ಗ ಜಿಲ್ಲೆಯ ಮಣಿಕಾಂತಗೌಡ ಪ್ರಥಮ, ಹಾವೇರಿ ಜಿಲ್ಲೆಯ ಮಂತೇಶ್ ಮಲ್ಲೇಶಪ್ಪ ಭಜಂತ್ರಿ ದ್ವಿತೀಯ, ಧಾರವಾಡ ಜಿಲ್ಲೆಯ ಅಮೋಘವರ್ಷ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net